ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪಾಪು

ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪಾಪು

ಹುಬ್ಬಳ್ಳಿ, ಮಾ. 17: ಪಾಟೀಲ ಪುಟ್ಟಪ್ಪನವರು ಎಂದಾಕ್ಷಣ ನಮಗೆ ನೆನೆಪಾಗುವುದು ಕನ್ನಡಪರಹೋರಾಟಕ್ಕೆ. ಪಾಟೀಲ ಪುಟ್ಟಪ್ಪನವರು ಪಾಪು ಎಂದೇ ಪ್ರಸಿದ್ಧಿಪಡೆದವರು. ವಿದ್ಯಾರ್ಥಿ ದೆಸೆಯಿಂದ ಸದಾ ಕನ್ನಡದ ನೆಲ, ಜಲ, ಭಾಷೆ, ಕನ್ನಡಿಗರಿಗೆಧಕ್ಕೆಯಾದಗ ಮೊದಲ ಕೂಗು ಪಾಪು ಅವರಿಂದ. ಕರ್ನಾಟಕದ ಏಕೀಕರಣದ ಹೋರಾಟ, ಗೋಕಾಕ ವರದಿ ಅನುಷ್ಠಾನ, ಆಡಳಿತದಲ್ಲಿ ಕನ್ನಡ ಜಾರಿ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ, ಕೇಂದ್ರ ಸರ್ಕಾರಕ್ಕೆ ಕನ್ನಡದ ಬಗ್ಗೆ ಸದಾ ಎಚ್ಚರಿಕೆ ನೀಡುವುದು, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಪತ್ರಕರ್ತರಾಗಿ, ಸಂಪಾದಕಾರಿ, ಹೋರಾಟಗಾರರಾಗಿ ಸದಾ ಹೋರಾಟವೇ ಅವರ ಬದುಕಾಗಿತ್ತು.

ಕನ್ನಡ ಮತ್ತು ಕರ್ನಾಟಕದ ವಿಷಯ ಬಂದಾಗ ಸದಾ ಮುಂಚೂಣಿಯಲ್ಲಿದ್ದುಕೊಂಡು ಎಚ್ಚರಿಕೆಯ ಗಂಟೆ ಭಾರಿಸುವವರು ಪಾಪು. ಕನ್ನಡ ಮತ್ತು ಕರ್ನಾಟಕಕ್ಕೆ ಧಕ್ಕೆ ಬಂದಾಗ ಯಾರೊಂದಿಗೂ ರಾಜೀಮಾಡಿಕೊಳ್ಳದೇ ಒಬ್ಬಂಟಿಯಾಗಿಯೂ ಹೋರಾಟ ನಡೆಸಿದ ಧೀಮಂತ ಹೋರಾಟಗಾರ.

ಇಂದು ಕರ್ನಾಟಕ ಅನ್ಯರ ಪಾಲಾಗದೇ ಉಳಿದಿರುವುದಕ್ಕೆ ಕಾರಣ ಪುಟ್ಟಪ್ಪನವರು. ತಮ್ಮ ವ್ಯಕ್ತಿತ್ವ, ಬರಹ, ಶ್ರಮದಿಂದ ರಾಜ್ಯವನ್ನು ಒಂದು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಹೆಸರನ್ನು ಚಿರಸ್ಥಾಯಿಗೊಳಿಸಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದಕ್ಕೆ ಪಾಟೀಲ ಪುಟ್ಟಪ್ಪನವರನ್ನು ಕರ್ನಾಟಕ ಹೃದಯ ಶಿವ ಚೈತನ್ಯ ಶಿಲ್ಪಿ ಎಂದು ಕರೆಯಲಾಗಿದೆ. ಬ್ಯಾಡಗಿಯಲ್ಲಿ ಕಲಿಯುತ್ತಿರುವಾಗಲೇ ಮಹಾತ್ಮ ಗಾಂಧೀಜಿಯವರ ಶಂಬ್ಬಾಸ್ ಗಿರಿಗೆ ಪಾತ್ರರಾದವರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ

ಒಂದೇ ಭಾಷೆಯನ್ನು ಮಾತನಾಡುವವರು, ಒಂದೇ ಜನಾಂಗಗಕ್ಕೆ ಸೇರಿದವವರು ಒಂದೇ ಕಡೆ ವಾಸ ಮಾಡಿದರೆ ಅದು ಪ್ರಗತಿ ಮತ್ತು ಸಂತಸ ಲಕ್ಷಣ ಎಂದು ನಂಬಿದವರು. ಆದ್ದರಿಂದಲೇ ಈಗ ಪ್ರತ್ಯೇಕ ಉತ್ತರ ಕರ್ನಾಟದಕ ರಾಜ್ಯದ ಕೂಗು ಹಾಕುವವರಿಗೆ ಚಾಟಿ ಏಟು ನೀಡುತ್ತಾ ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆಸಿದವರಿಗೆ ಅಂದು ರಕ್ತ ಚೆಲ್ಲಿದವರಿಗೆ ಗೊತ್ತು ಸಮಗ್ರ ಕರ್ನಾಟದಕ ಕಲ್ಪನೆ ಎನ್ನುತ್ತಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಾಳತ್ವದಲ್ಲಿ ಕನ್ನಡ ಕ್ರಿಯಾ ಸಮಿತಿ ರಚನೆ ಮಾಡಲಾಯಿತು. ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಡಾ. ಶಂ. ಬಾ. ಜೋಶಿ ನೇಮಕ ಮಾಡಲಾಯಿತು. ಡಾ. ಆರ್. ಸಿ. ಹಿರೇಮಠ, ಚೆನ್ನವೀರ ಕಣವಿ, ಬಸವರಾಜ ಕಟ್ಟಿಮನಿ ಅಂತವರ ಜೊತೆ ಹೋರಾಟದ ರೂಪು ರೇಷೆ ಹಾಕಿದವರು ಪಾಪು. ಡಾ. ರಾಜಕುಮಾರ್, ಟಿ. ವೆಂಕಟೇಶ್, ಲಂಕೇಶ್, ಸುಮುತಿಂದ್ರ ನಾಡಿಗ್, ಬಿ.ಟಿ ಲಲಿತಾನಾಯಕ್, ತಿಪ್ಪೆರುದ್ರಸ್ವಾಮಿ ಮುಂತಾದವರು ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿದರು. ಅಂದು ಪಾಪು ವಿಶ್ವ ಮೇಳ ಸದಸ್ಯತ್ವಕ್ಕೆ ಹಾಗೂ ಡಾ. ಗಂಗೂಬಾಯಿ ಹಾನಗಲ್ ರಾಜ್ಯ ಸಂಗೀತ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ನಿಂತರು.

ಹೀಗೆ ಪಾಟೀಲ್ ಪುಟ್ಟಪ್ಪನವರು ಹೋರಾಟದ ಒಂದು ಅಂಗವಾಗಿ ನಮ್ಮ ನಡುವೆ ಇದ್ದಾರೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ರೈಲ್ವೆವಲಯ ಹೋರಾಟಕ್ಕೆ ಹೋರಾಡಿದ್ದು, ಇಂದಿಗೂ ಸುವರ್ಣಾಕ್ಷರಗಳಿಂದ ಬರೆದು ಇಡಲಾಗಿದೆ. ಇಂದಿಗೂ ಕನ್ನಡಕ್ಕೆ ಧಕ್ಕೆ ಬಂದಾಗ ಇಳಿವಯಸ್ಸಿನಲ್ಲೂ ಧ್ವನಿ ಎತ್ತುವ ಛಲಗಾರಿಕೆ ಇದೆ. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ನಾಲವತ್ತು

ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ದಿ. ಇಂದಿರಾಗಾಂಧಿ ಅವರ ಕಾಲದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾಗ ಸಹ ಕನ್ನಡದ ಬಗ್ಗೆ ಲೋಕಸಭೆಯಲ್ಲಿ ಕನ್ನಡಪರ ಮಾತನಾಡಿದವರು ಪಾಪು.

 

ಫ್ರೆಶ್ ನ್ಯೂಸ್

Latest Posts

Featured Videos