ಇದೇ ಲಾಸ್ಟ್ ವಾರ್ನಿಂ‍ಗ್ : ಪ್ರಜ್ವಲ್

ಇದೇ ಲಾಸ್ಟ್ ವಾರ್ನಿಂ‍ಗ್ : ಪ್ರಜ್ವಲ್

ಹಾಸನ, ಜ. 13 : ಹಾಸನ ತಹಶೀಲ್ದಾರ್ ಶಿವಶಂಕರಪ್ಪ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಯಾರ ಇನ್ಫ್ಲೂಯೆನ್ಸ್ನಿಂದ ಬಂದ್ರೂ ಇಲ್ಲಿ ನಡೆಯೊಲ್ಲ ಎಂದಿದ್ದು ವೀಡಿಯೋ ವೈರಲ್ ಆಗಿದೆ.
ಯಾರ್ರಿ ತಹಶೀಲ್ದಾರ್ ಯಾರೇ ಇಂಪ್ಲ್ಯುಯೆನ್ಸ್ನಿಂದ ಬಂದ್ರೂ ಇಲ್ಲಿ ನಡೆಯಲ್ಲ. ಕನಿಷ್ಟ ಎಂಪಿ ಅವರಿಗೆ ಗೌರವ ಕೊಡಬೇಕು ಎಂದು ಗೊತ್ತಿಲ್ಲವಾ..? ಈ ಅಧಿಕಾರಿ ಬಗ್ಗೆ ಡಿಸಿ ಅವರಿಗೆ ದೂರು ಕೊಡುತ್ತೇನೆ.

ಯಾರ ಇನ್ಫ್ಲುಯೆನ್ಸ್ ಇಲ್ಲಿ ನಡೆಯೊಲ್ಲ ಎಂದು ಪ್ರಜ್ವಲ್ ಗರಂ ಆಗಿದ್ದಾರೆ.
ತಹಶೀಲ್ದಾರ್ ಶಿವಶಂಕರಪ್ಪ ಸಂಸದರ ಜನಸ್ಪಂದನ ಸಭೆಗೆ ಗೈರಾಗಿರುವುದೇ ಪ್ರಜ್ವಲ್ ಸಿಟ್ಟಿಗೆ ಕಾರಣವಾಗಿದೆ. ಇದಕ್ಕೆ ಪ್ರಜ್ವಲ್ ರೇವಣ್ಣ, 35ನೇ ವಾರ್ಡ್ನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದು, ಜನಪ್ರತಿನಿಧಿಗಳಿಗೆ, ಜನರಿಗೆ ಕನಿಷ್ಠ ಬೆಲೆ ಇಲ್ವ ? ಯಾವುದೇ ಜನಪ್ರತಿಗಳು ಬಂದ್ರೂ ಅಧಿಕಾರಿಗಳು ಬರ್ಬೇಕಷ್ಟೆ..? ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos