ನಾಳೆಯಿಂದ ಒಡೆಯನ ಅಬ್ಬರ

ನಾಳೆಯಿಂದ ಒಡೆಯನ ಅಬ್ಬರ

ಬೆಂಗಳೂರು, ಡಿ. 11: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನದಿಗಳಲ್ಲಿ ಮೂಡಿ ಮರುತ್ತಿರುವ ಚಿತ್ರಗಳೆಲ್ಲ ಒಂದಕ್ಕಿಂತ ಒಂದು ಸುಪರ್ ಹಿಟ್ ಆಗುತ್ತಿವೆ. ಹೌದು,  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನಯದ ಬಹು ನಿರೀಕ್ಷಿತ ಒಡೆಯ ಚಿತ್ರ ನಾಳೆ ತೆರೆಗೆ ಮೇಲೆ ಅಪ್ಪಳಿಸಲಿದೆ.

ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಒಡೆಯ ಚಿತ್ರ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ವಿದೇಶಗಳಲ್ಲೂ ಚಿತ್ರ ನಾಳೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಎನ್.ಸಂದೇಶ್ ತಿಳಿಸಿದ್ದಾರೆ.

ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ದರ್ಶನ್ ಅಭಿನಯದ ಒಡೆಯ ಚಿತ್ರವನ್ನ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಜಯ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಲಿದ್ದು, ಅಭಿಮಾನಿಗಳು ಟಿಕೆಟ್ಗಾಗಿ ಚಿತ್ರಮಂದಿರದಲ್ಲಿ ನೆನ್ನೆ ರಾತ್ರಿಯಿಂದಲೇ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos