ವಿದ್ಯಾರ್ಥಿಗಳ ಅಸ್ವಸ್ಥ

ವಿದ್ಯಾರ್ಥಿಗಳ ಅಸ್ವಸ್ಥ

ಹುಬ್ಬಳ್ಳಿ, ಡಿ. 14:  ಗ್ರಾಮೀಣ ಪ್ರದೇಶದಲ್ಲಿ ಹರಡಿದ್ದ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ವಿಶೇಷ ಶಾಲಾ ಲಸಿಕಾ ಅಭಿಯಾನದಡಿ ಡಿಟಿ ಚುಚ್ಚುಮದ್ದು ನೀಡಲಾಗುತ್ತಿದೆ. ಅದರಂತೆ ಪ್ರಾಥಮಿಕ ಆರೋಗ್ಯ ಉಪಕೇಂದ್ರದಿಂದ ಹೆಬಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಚುಚ್ಚುಮದ್ದು ನೀಡಲಾಗಿದೆ.

ಚುಚ್ಚುಮದ್ದು ಪಡೆದ ಕೆಲಸಮಯದ ಬಳಿಕ ವಿದ್ಯಾರ್ಥಿನಿ ಹೆಬಸೂರಿನ ದಿಯಾ ಅಕ್ಕಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾಳೆ. ಇದಾದ ನಂತರ ಚುಚ್ಚುಮದ್ದು ಪಡೆದ ಎಲ್ಲ ಮಕ್ಕಳಿಗೆ ವಾಂತಿ, ತಲೆನೋವು ಉಂಟಾಗಿ ಬಳಲಿದ್ದಾರೆ. ತಕ್ಷಣ ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಕಿಮ್ಸ್ಗೆ ಕರೆತಂದು ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳು ಚೇತರಿಸಿಕೊಂಡಿದ್ದು, ಇಂದು ಬೆಳಗ್ಗೆವರೆಗೆ ಆಸ್ಪತ್ರೆಯಲ್ಲಿಟ್ಟುಕೊಂಡು ಬಳಿಕ ಮನೆಗೆ ಕಳುಹಿಸಲು ವೈದ್ಯರು ನಿರ್ಧರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos