ಸರ್ಕಾರ ತುಂಬಾ ತಡವಾಗಿ ಬರಪೀಡಿತ ತಾಲ್ಲೂಕುಗಳ ಹೆಸರುಗಳನ್ನು ಘೋಷಿಸಿದೆ!

ಸರ್ಕಾರ ತುಂಬಾ ತಡವಾಗಿ ಬರಪೀಡಿತ ತಾಲ್ಲೂಕುಗಳ ಹೆಸರುಗಳನ್ನು ಘೋಷಿಸಿದೆ!

ಚಾಮರಾಜನಗರ: ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದರು ಸಹ ಅಂದುಕೊಂಡಷ್ಟು ರಾಜ್ಯದಲ್ಲಿ ಸಹ ಮಳೆ ಆಗಿರಲಿಲ್ಲ ಇದರಿಂದ ನೀರಿಗೆ ರಾಜ್ಯದಲ್ಲಿ ಬರ ಬಂದಿತ್ತು. ರಾಜ್ಯದಲ್ಲಿ ಈ ಬಾರಿ ರೈತನ ಸಂಕಷ್ಟ ಹೇಳತೀರದಾಗಿದೆ. ಮುಂಗಾರು ಮಳೆ ಇಲ್ಲದೇ ಬರಗಾಲ ಪರಿಸ್ಥಿತಿ ಎದುರಾಗಿದೆ.

ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರ ಇದೆ. ಆದರೆ, ಸರ್ಕಾರ 3 ತಾಲ್ಲೂಕುಗಳಲ್ಲಿ ಸಾಧಾರಣ ಬರ ಎಂದು ಘೋಷಿಸಿದೆ. ಸಮಗ್ರ ಮಾಹಿತಿ ನೀಡಲು ಅಧಿಕಾರಿಗಳು ವಿಫಲವಾಗಿದ್ದು, ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.
‘ಒಂದು ವೇಳೆ ಘೋಷಿಸದಿದ್ದರೆ, ಇದೇ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊನ್ನೂರು ಬಸವಣ್ಣ, ‘ಸರ್ಕಾರ ತುಂಬಾ ತಡವಾಗಿ ಬರಪೀಡಿತ ತಾಲ್ಲೂಕುಗಳ ಹೆಸರುಗಳನ್ನು ಘೋಷಿಸಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳಲ್ಲಿ ಸಾಧಾರಣ ಬರ ಇದೆ ಎಂದು ಹೇಳಿದೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳ ಹೆಸರುಗಳನ್ನು ಬಿಟ್ಟಿದೆ. ಆದರೆ, ಈ ತಾಲ್ಲೂಕುಗಳಲ್ಲೂ ಮಳೆಕೊರತೆ ಇದ್ದು, ಬೆಳೆಗಳು ಹಾನಿಯಾಗಿವೆ. ಬಹುತೇಕ ರೈತರು ಇನ್ನೂ ಬಿತ್ತನೆ ಮಾಡಿಲ್ಲ’ ಎಂದು ಹೇಳಿದರು.
ಯಳಂದೂರು ತಾಲ್ಲೂಕಿನಲ್ಲಿ ನಾಲೆ ನೀರು ಇದೆ ಎಂಬ ಕಾರಣಕ್ಕೆ ತಾಲ್ಲೂಕನ್ನು ಪರಿಗಣಿಸಿಲ್ಲ. ಆದರೆ, ನಾಲೆಯಲ್ಲಿ ಇನ್ನೂ ನೀರು ಬಂದಿಲ್ಲ. ಯಾವ ಕೆರೆ, ಹಳ್ಳ ಕೊಳ್ಳಗಳು ತುಂಬಿಲ್ಲ. ಸಮಗ್ರವಾದ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮಳೆ ಬಂದಾಗ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾಂಕ್ರೀಟ್‌ ರಸ್ತೆಯಲ್ಲಿ ಹೋಗುವ ನೀರನ್ನು ಪರಿಗಣಿಸಿ ವರದಿ ನೀಡಿದಂತೆ ಕಾಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos