ಸಬ್ ಇನ್ಸ್ ಪೆಕ್ಟರ್‌ಗೇ ಸಿಗಲಿಲ್ಲ ಚಿಕಿತ್ಸೆ, ಸಾವು

  • In State
  • July 3, 2020
  • 229 Views
ಸಬ್ ಇನ್ಸ್ ಪೆಕ್ಟರ್‌ಗೇ ಸಿಗಲಿಲ್ಲ ಚಿಕಿತ್ಸೆ, ಸಾವು

ಬೆಂಗಳೂರು: ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಚಿಕಿತ್ಸೆ ಸಿಗದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮೃತಪಟ್ಟಿರುವ ಘಟನೆ ನಡೆದಿದೆ.

ಜ್ವರದಿಂದ, ಉಸಿರಾಟದ ತೊಂದರೆಯಿAದ ನರಳುತ್ತಿದ್ದ ವೃದ್ದ ಪಂಚಾಕ್ಷರಿ (೬೭) ಕೋರಮಂಗಲ ನಿವಾಸಿ ನಿವೃತ್ತ ಪೋಲಿಸ್ ಸಬ್ ಇನ್ಸ್ ಪೆಕ್ಟರ್.

ಹೆಬ್ಬಾಳದ ಡಾಕ್ಟರ್ ಓರ್ವರ ಬಳಿ ಚಿಕಿತ್ಸೆಗೆ ತೆರಳಿದ್ದು, ಜ್ಬರ ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳಿದ್ದರು. ಅಲ್ಲಿಂದ ವಿಲ್ಸನ್ ಗಾರ್ಡನ್ ಅಗಡಿ ಆಸ್ಪತ್ರೆಗೆ ಪಂಚಾಕ್ಷರಿ ಕುಟುಂಬಸ್ಥರು ತೆರಳಿದ್ದರು. ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕವೇ ಚಿಕಿತ್ಸೆ ಎಂದು ಸ್ವಾಬ್ ಪಡೆದು ೪,೫೦೦ ಹಣವನ್ನು ಆಸ್ಪತ್ರೆ ಸಿಬ್ಬಂದಿ ಪಾವತಿಸಿಕೊಂಡಿದ್ದರು. ಅಡ್ಮಿಟ್ ಮಾಡಿಕೊಳ್ಳದೇ ವೆಂಟಿಲೇಟರ್ ಇಲ್ಲವೆಂದು ಹೇಳಿ ಚಿಕಿತ್ಸೆಗೆ ನಕಾರ ಮಾಡಿದ್ದರು.

ಳಿಕ ವೊಕಾರ್ಡ್ ಆಸ್ಪತ್ರೆ, ಫೋರ್ಟಿಸ್ ಅಲ್ಲೂ ಚಿಕಿತ್ಸೆ ಸಿಗಲಿಲ್ಲ. ರಾಜೀವ್ ಗಾಂಧೀ ಆಸ್ಪತ್ರೆಯಲ್ಲೂ ಸ್ಪಂದನೆ ಸಿಗಲಿಲ್ಲ. ಸೇಂಟ್ ಜಾನ್ಸ್ ಗೆ ತೆರಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮೃತಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos