ಮಾತೃ ಭಾಷೆಯಲ್ಲಿ ಶಿಕ್ಷಣ ನೀಡದೆ ಸಮ್ಮೇಳನ ವ್ಯರ್ಥ

ಮಾತೃ ಭಾಷೆಯಲ್ಲಿ ಶಿಕ್ಷಣ ನೀಡದೆ ಸಮ್ಮೇಳನ ವ್ಯರ್ಥ

ಮಡಿಕೇರಿ,ಜ.11: ಕನ್ನಡ ಸಾಹಿತ್ಯ ಪರಿಷತ್ ಅರ್ಧ ಸತ್ತಿದ್ದು, ಈಗ ಕೇವಲ ಉಸಿರು ಮಾತ್ರ ಇದೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡದೆ ಸಮ್ಮೇಳನ ವ್ಯರ್ಥ. ಅದರಲ್ಲೂ ಸಚಿವನಾಗಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದರಿಂದ ದ್ವೇಷ ಬೆಳಸಿದಂತಾಗುತ್ತದೆ ಎಂದು ಮಡಿಕೇರಿಯಲ್ಲಿ ದೇವನೂರು ಮಹಾದೇವ ಅವರು ಸಚಿವ ಸಿ.ಟಿ ರವಿಗೆ ತಿರುಗೇಟು ನೀಡಿದ್ದಾರೆ.

ಪ್ರಗತಿಪರ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಎ ವಿರುದ್ಧ ಮಾತನಾಡಿದ ಅವರು, ಪೌರತ್ವ ಕಾಯ್ದೆ ಬಂದರೆ ಇವರ ಸ್ಥಿತಿ ಏನು? ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ? ಈಗ ಪೌರತ್ವದ ವಿರುದ್ದ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂತೆಯೇ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ತಡೆ ನೀಡಿದ ವಿಚಾರವಾಗಿ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಶತಮಾನದ ಇತಿಹಾಸ ಇದೆ. ಆದರೆ, ಹಲವಾರು ಅಡೆತಡೆ, ಸರ್ಕಾರದ ವಿರೋಧದ ನಡುವೆಯೂ ನಿನ್ನೆ ಜನರೇ ದೇಣಿಗೆ ಕೊಟ್ಟು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಹೊಸದೊಂದು ಇತಿಹಾಸಕ್ಕೆ ಕಾರಣವಾಗಿದ್ದರು.

ಭಾರತದಲ್ಲಿ ಶೇಕಡಾ 8 ರಷ್ಟು ಮಾತ್ರ ಮೂಲನಿವಾಸಿಗಳು. ಉಳಿದವರೆಲ್ಲಾ ವಲಸೆ ಬಂದವರು. ಕಳೆದ 16 ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಚರಿಸುತ್ತಾ ಬಂದಿದೆ. ಆದರೆ, ಯಾವ ವರ್ಷವೂ ಕೇಳಿ ಬರದ ಪ್ರತಿರೋಧದ ಕೂಗು ಈ ವರ್ಷ ಕೇಳಿ ಬಂದಿತ್ತು. ಅದಕ್ಕೆ ಕಾರಣ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ವಿಠಲ ಹೆಗಡೆ.

ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ಪ್ರತಿಕ್ರಿಯಿಸಿ, ವಿಠಲ ಹೆಗಡೆ ಅವರು ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಕಸಪಾ ಆಯ್ಕೆ ಮಾಡಿತ್ತು. ಆದರೆ, ಅವರು ನಕ್ಸಲ್ ಬೆಂಬಲಿಗ ಹಾಗೂ ಅವರ ಮೇಲೆ ಹಲವಾರು ಪ್ರಕರಣಗಳಿವೆ. ಹೀಗಾಗಿ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಾರದು ಎಂದು  ವಾರ್ನಿಂಗ್ ನೀಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos