ಕಾಮಗಾರಿ ನಡೆಯದೇ ಬಿಲ್ ಸಂದಾಯ

ಕಾಮಗಾರಿ ನಡೆಯದೇ ಬಿಲ್ ಸಂದಾಯ

ಕನಕಪುರ:ಗ್ರಾಮಗಳ ಉಧ್ಧಾರಕ್ಕಾಗಿ ಸರಕಾರವು ನರೇಗಾ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವು ಸದ್ಬಳಕೆಯಾಗದೆ ಉಳ್ಳವರ ಪಾಲಾಗಿದೆ ಎಂಬ ಅನುಮಾನ ಮೂಡಿಸುತ್ತದೆ ಏಕೆಂದರೆ ಚಿಕ್ಕ ಕುರುಬರಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸ ನಡೆಯದೇ ಹಣ ಸಂದಾಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕನಕಪುರ ತಾಲೂಕಿನ ಹಾರೋಹಳ್ಳಿಯ ಚೀಲೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕ ಕುರುಬರಹಳ್ಳಿ ಗ್ರಾಮದಲ್ಲಿ ೨೦೧೮-೧೯ ನೇ ಸಾಲಿನಲ್ಲಿ ಸುಮಾರು ೮ ಲಕ್ಷ ಮೊತ್ತದಲ್ಲಿ ಮಾಲಣ್ಣನ ಮನೆಯಿಂದ ದಾಸಪ್ಪನ ಜಮೀನಿನವರೆಗೆ ಸರ್ವೆ ಗುರುತು ಕಾಮಗಾರಿ ಮಾಡಲು ಅನುಮೋದನೆ ಪಡೆದುಕೊಂಡು ಕಾಮಗಾರಿ ಮಾಡದೇ ಎನ್.ಎಂ.ಆರ್ ಮೊತ್ತವನ್ನು ಅಧಿಕಾರಿ ಮತ್ತು ಇಲ್ಲಿನ ಮಾಜಿ ಗ್ರಾ.ಪಂ.ಸದಸ್ಯ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಪ್ರಶ್ನಿಸಿದಾಗ ಕೆಲಸ ಪ್ರಾರಂಭ:
ಇನ್ನೊಂದೆಡೆ ಇದೇ ಗ್ರಾ.ಪಂ. ಮಾಜಿ ಸದಸ್ಯ ಪಕ್ಕದ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ೨೦೧೮-೧೯ನೇ ಸಾಲಿನ ಸುಮಾರು ೮ಲಕ್ಷ ವೆಚ್ಚದಲ್ಲಿ ದೊಡ್ಡ ಕುರುಬರಹಳ್ಳಿಯ ಚನ್ನಪ್ಪ ಮನೆಯಿಂದ ಬಿಸಿಲಮ್ಮ ದೇವಸ್ಥಾನದವರೆಗೆ ಸರ್ವೆ ಗುರುತು ರಸ್ತೆ ಕಾಮಗಾರಿಗೆ ಅನುಮೋದನೆ ಪಡೆದು, ಎನ್.ಎಂ.ಆರ್ ಮೊತ್ತವನ್ನು ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಅನುಮೋದನೆ ಪಡೆದು ಒಂದು ವರ್ಷವಾದರೂ ಇಲ್ಲಿಯವರೆಗೂ ಕಾಮಗಾರಿಯನ್ನು ಪ್ರಾರಂಭ ಮಾಡದ ಮಾಜಿ ಗ್ರಾ.ಪಂ. ಸದಸ್ಯ ಗ್ರಾಮಸ್ಥರು ಪ್ರಶ್ನಿಸಿದ ಕೂಡಲೇ ತರಾತುರಿಯಲ್ಲಿ ಕಾಮಗಾರಿಯನ್ನು ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos