ನಟಿ ಭಾನುಪ್ರಿಯ ವಿರುದ್ಧ ಕಿರುಕುಳ ಆರೋಪ

ನಟಿ ಭಾನುಪ್ರಿಯ ವಿರುದ್ಧ ಕಿರುಕುಳ ಆರೋಪ

ಚೆನ್ನೈ: ಕನ್ನಡ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜರೊಂದಿಗೆ ಅಭಿನಯಿಸಿ ಖ್ಯಾತಿಗಳಿಸಿರುವ ಬಹುಭಾಷಾ ನಟಿ ಭಾನುಪ್ರಿಯ ಅವರು ತಮ್ಮ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ ಅಪ್ರಾಪ್ತರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಆಂಧ್ರಪ್ರದೇಶದ ಸಮಲ್ ಕೋಟ್‌ನಲ್ಲಿರುವ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಭಾನುಪ್ರಿಯ ಮನೆಯಲ್ಲಿ ನನ್ನ ಮಗಳು ಮನೆ ಕೆಲಸದಾಕೆಯಾಗಿ ಸೇರಿಕೊಂಡಿದ್ದು, ಇಲ್ಲಿ ತನಕ ಯಾವುದೇ ಸಂಬಳ ಸಿಕ್ಕಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಿದ್ದಾಳೆ ಎಂದು ತಾಯಿಯೊಬ್ಬರು ದೂರು ನೀಡಿ ಅಚ್ಚರಿ ಮೂಡಿಸಿದ್ದಾರೆ. 3 ಮಕ್ಕಳ ತಾಯಿ ನೀಡಿದ ದೂರಿನ ಮೇರೆಗೆ ಮಕ್ಕಳ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಟಿ ನಗರದಲ್ಲಿರುವ ನಟಿ ಮನೆಯತ್ತ ಧಾವಿಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಮಕ್ಕಳ ಹಕ್ಕು ಸಂರಕ್ಷಣಾ ಕಾರ್ಯಕರ್ತರಾದ ಅಚ್ಯುತ್ ರಾವ್ ಅವರು ರಾಷ್ಟ್ರೀಯ ಮಕ್ಕಳ ಆಯೋಗಕ್ಕೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಬಾಲ ಕಾರ್ಮಿಕ ಕಾಯ್ದೆಯಡಿಯಲ್ಲಿ ನಟಿ ಭಾನುಪ್ರಿಯರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆಯಿದ್ದು, ಮಾನವ ಕಳ್ಳಸಾಗಣೆ ಶಂಕೆ ವ್ಯಕ್ತವಾಗಿದೆ ಎಂದು ಅಚ್ಯುತ್ ರಾವ್ ಆರೋಪಿಸಿದ್ದಾರೆ. ಮನೆಗೆಲಸದಾಕೆ ಮೇಲೆ ಕಳ್ಳತನದ ಆರೋಪಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಬಾನುಪ್ರಿಯ ನಾನು ಅಪ್ರಾಪ್ತರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿಲ್ಲ. ಆಕೆಗೆ 18 ತುಂಬಿದೆ ಎಂದು ಅವರ ತಾಯಿಗೆ ಇಲ್ಲಿ ಕೆಲಸಕ್ಕೆ ಸೇರಿಸಿದ್ದರು. ಮನೆಯಲ್ಲಿ ಕಳುವಾದ ಆಭರಣಗಳು ಆಕೆಯ ತಾಯಿಯ ಬಳಿ ಇರುವುದು ಪತ್ತೆಯಾಗಿದ್ದು, ಎಲ್ಲವನ್ನು ವಾಪಸ್ ಮಾಡುವಂತೆ ಸೂಚಿಸಿದೆ. ಐಪ್ಯಾಡ್,
ಕೆಮರಾ ಹಾಗೂ ವಾಚ್ ಮಾತ್ರ ವಾಪಸ್ ತಂದುಕೊಟ್ಟಳು. ಈಗ ನೋಡಿದರೆ ನನ್ನ ವಿರುದ್ಧವೇ ಕೇಸು ದಾಖಲಿಸಿದ್ದಾರೆ. ಅದು ಆಂಧ್ರಪ್ರದೇಶದಲ್ಲಿ, ಇದೆಲ್ಲವೂ ವ್ಯವಸ್ಥಿತವಾದ ಕುತಂತ್ರ ಎಂದು ಭಾನುಪ್ರಿಯ ಪ್ರತಿಕ್ರಿಯಿಸಿದ್ದಾರೆ. ತಿಂಗಳಿಗೆ ೧೦ ಸಾವಿರ ರುಪಾಯಿ ಸಂಬಳ ನೀಡಬೇಕಿದ್ದ ಭಾನುಪ್ರಿಯ ಕಳೆದ ೧೮ ತಿಂಗಳಿನಿಂದ ಸಂಬಳ ನೀಡಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos