ಶಿಕ್ಷಕರಿಗೆ ಕೇಂದ್ರ ಮಾದರಿ ವೇತನ ನೀಡಬೇಕು

  • In State
  • December 14, 2020
  • 196 Views
ಶಿಕ್ಷಕರಿಗೆ ಕೇಂದ್ರ ಮಾದರಿ ವೇತನ ನೀಡಬೇಕು

ದೇವನಹಳ್ಳಿ: ರಾಜ್ಯದ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಪಣ ತೊಟ್ಟು ದುಡಿಯುತ್ತಿರುವ ಶಿಕ್ಷಕರ ಸಮಸ್ಯೆಗಳು ಅಪಾರವಾಗಿದ್ದು ಬಗೆಹರಿಸಲು ಸಂಘಟನೆ ಅಗತ್ಯವಾಗಿದೆ. ಕೇಂದ್ರ ಸರ್ಕಾರಿ ನೌಕರರ ಮಾದರಿ ಸಮಾನ ವೇತನಕ್ಕೆ ಕೇಂದ್ರ ಶಿಕ್ಷಕರ ಸಂಘಗಳೊಟ್ಟಿಗೆ ಸಮನ್ವಯ ಸಾಧಿಸಿ ಹೋರಾಡಲು ಕ್ರಮವಹಿಸಬೇಕಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಸ್.ಪಿ.ವೆಂಕಟಾಚಲಯ್ಯ ತಿಳಿಸಿದರು.
ಇದೇ ತಿಂಗಳ ೧೫ ರಂದು ನಡೆಯುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಣದ ವಿವಿಧ ಕಡೆ ಶಿಕ್ಷಕರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡು ಮಾತನಾಡಿ,
ಎನ್‌ಪಿಎಸ್ ನಂತಹ ಮಾರಕ ಕಾಯಿದೆಗಳು ನೌಕರರ ಮಾನಸಿಕ ನೆಮ್ಮದಿ ಹಾಳುಮಾಡುತ್ತಿದ್ದು, ಇದನ್ನು ತೊಲಗಿಸಲು ಸಾಂಘಿಕ ಹೋರಾಟ ಅಗತ್ಯವಾಗಿದೆ. ಪರವೀಧರ ಶಿಕ್ಷಕರನ್ನು ೬ ರಿಂದ ೮ ನೇ ತರಗತಿಗಳಿಗೆ ಬೋಧಿಸಲು ವಿಲೀನಗೊಳಿಸಬೇಕು. ಸದ್ಯ ಮಾಡುತ್ತಿರುವ ಸಿ ಅಂಡ್ ಆರ್ ರೂಲ್ಸ್ ಗಳಿಗೆ ತಿದ್ದುಪಡಿ ಮಾಡಲು ಹೋರಾಟ ಮಾಡಬೇಕು. ಆಕಸ್ಮಿಕ ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಸಂಘದ ವತಿಯಿಂದ ಕನಿಷ್ಟ ೫ ಸಾವಿರ ರೂ.ಗಳ ಸಹಾಯಧನವನ್ನು ನೀಡುವ ಬಗ್ಗೆ ಚಿಂತಿಸಲಾಗುವುದು ಎಂದರು.
ಗ್ರಾಮೀಣ ಕೃಪಾಂಕ ಮತ್ತು ಕೃಪಾಂಕರಹಿತ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥಹೋರಾಟ ನಡೆಸಲಾಗುವುದು. ಶಿಕ್ಷಕರಿಗೆ ಸಮಯೋಚಿತವಾಗಿ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನೂ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos