ಸಾಹಿತಿಗಳಿಗೆ ಶಿಕ್ಷಕ ಸಾಹಿತ್ಯ ಪ್ರಶಸ್ತಿ

ಸಾಹಿತಿಗಳಿಗೆ ಶಿಕ್ಷಕ ಸಾಹಿತ್ಯ ಪ್ರಶಸ್ತಿ

ಔರಾದ: ತಾಲ್ಲೂಕಿನ ಮೂವರು ಶಿಕ್ಷಕ ಸಾಹಿತಿಗಳಾದ ಮಲ್ಲಿಕರ‍್ಜುನ ಟಂಕಸಾಲೆ, ಬಿ.ಎಂ.ಅಮರವಾಡಿ ಬಾಲಾಜಿ ಕುಂಬಾರ, ರವರು ಶಿಕ್ಷಕ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೀದರಿನ ಸಾಹಿತ್ಯ ರತ್ನ ಅಣ್ಣಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಲೋಕ್ ಮಂಚ್ ಟ್ರಸ್ಟ್ ಹಾಗೂ ಶ್ರೀ ಸ್ವಾಮಿ ನರೇಂದ್ರ ಪದವಿ ಪರ‍್ವ ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಇಂದು “ಶಿಕ್ಷಕರ ದಿನಾಚರಣೆ” ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತ್ತು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಲೇಖಕರಾಗಿ ಕೃತಿಗಳು ಪ್ರಕಟಿಸಿ ಶಿಕ್ಷಣದ ಜೊತೆಗೆ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಅಪರೂಪದ ೨೬ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಎಂ.ಎಸ್.ಮನೋಹರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos