ನಗರದಲ್ಲಿ ಯಾವೂದೇ ಈರಿ ತೊಂದರೆಯಾಗದಂತೆ ನಿಗಾ ವಹಿಸಿ

ನಗರದಲ್ಲಿ ಯಾವೂದೇ ಈರಿ ತೊಂದರೆಯಾಗದಂತೆ ನಿಗಾ ವಹಿಸಿ

ಇಲಕಲ್ಲ, ಮಾ. 27: ಕೋರೋನಾ ಭೀತಿ ಹಿನ್ನಲೆಯಲ್ಲಿ ದೇಶಾಧ್ಯಂತ ಎದುರುಸುತ್ತಿರು ಮೂಲ ಭೂತ ಸೌಕರ್ಯಗಳ ಕೊರತೆಯಿಂದ ಜನ ತೊಂದರೆಯನ್ನು ಅನುಭವಿಸುವಂತಾಗಿದೆ ಇದಕ್ಕೆ ಇಲಕಲ್ಲ ಹೊರತಾಗಿಲ್ಲ ಆಹಾರ ತರಕಾರಿ ಹಣ್ಣುಗಳನ್ನು ಕೊಳ್ಳಲು ಜನ ಮತ್ತೆ ರಸ್ತೆ ಇಳಿಯುತ್ತಿರುವುದು ಮತ್ತು ತರಕಾರಿ ಕೊಳ್ಳಲು ನೂಕುನುಗ್ಗಲು ಮಾಡುತ್ತಿರುವುದನ್ನು ತಪ್ಪಿಸಲು ಸಿ.ಪಿ.ಐ.ಅಯ್ಯನಗೌಡ ಪಾಟೀಲ, ಇಲಕಲ್ಲ ನಗರ ಪಿ.ಎಸ್.ಐ. ಆರ್.ವೈ.ಜಲಗೇರಿ, ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ನೇತೃತ್ವದಲ್ಲಿ ತರಕಾರಿ ಹಾಗೂ ಹಣ್ಣು ಮಾರಾಟಗಾರರ ಸಭೇ ನಡೆಸಲಾಯುತು.

ಇಲಕಲ್ಲ ನಗರದಲ್ಲಿ ಯಾವೂದೇ ಈರಿ ತೊಂದರೆಯಾಗದಂತೆ ನಿಗಾ ವಹಿಸಲು ಈ ಸಭೆ ಕರೆಯಲಾಗಿದ್ದು, ಮಾರಾಟಗಾರರು ಅಧಿಕಾರಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದರು. ತರಕಾರಿ ಹೋಲ್ ಸೇಲ್ ವ್ಯಾಪಾರಸ್ಥರು ಬೆಳಿಗ್ಗೆ 5 ರಿಂದ 7 ಗಂಟೆಗೆ ತಮ್ಮ ವಹಿವಾಟು ಮುಗಿಸಿ ಮನೆಗೆ ಹೋಗಬೇಕು. ನಂತರ ತರಕಾರಿ ಅಂಗಡಿಯವರು ಮಾರಾಟಗಾರರು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ನಿಗದಿ ಪಡಿಸಿದ ಜಾಗದಲ್ಲಿ ಅಂತರವನ್ನು ಕಾಪಾಡಿಕೊಂಡ ವ್ಯಾಪಾರ ನಡೆಸಬೇಕೆಂದು ಸೂಚನೆ ನೀಡಿದರು. ನಿಗದಿ ಪಡಿಸಿದ ಈ ರೀತಿ ಇದ್ದು ದರ್ಗಾ, ಎ.ಪಿ.ಎಂ.ಸಿ.,ಬಸ್ ಸ್ಟಾಂಡ, ಬಸವನಗರದ ಹನುಮಂತ ಮಂದಿರದ ಹತ್ತಿರ, ಕೆ.ಇ.ಬಿ. ಟ್ಯಾಂಕ್ ಗಾರ್ಡನ ಹತ್ತಿರ, ಬನ್ನಿಕಟ್ಟಿ ಮತ್ತು ಹಳೆ ಮಾರ್ಕೇಟ್ ನಲ್ಲಿ ತರಕಾರಿಗಳು ದೊರೆಯಲಿದ್ದು, ಅದರಂತೆ ತರಕಾರಿಗಳನ್ನು ಒತ್ತುವ ಬಂಡಿಗಳಲ್ಲಿ ಸಾಗಿಸಿ ಮನೆ ಮನೆಗೆ ತೆರಳಿ ವ್ಯಾಪಾರ ಮಾಡುವಂತೆಯೂ ಸೂಚಿಸಲಾಗಿದೆ.

ಹಣ್ಣುಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆ ಹಾಗೂ ಸಾಯಂಕಾಲ 4 ರಿಂದ 6 ಗಂಟೆಗಳವರೆಗೆ ಮನೆ ಮನೆಗೆ ಒತ್ತು ಬಂಡಿಗಳಲ್ಲಿ ವ್ಯಾಪರ ನಡೆಸಲು ಪರವಾನಿಗೆ ನೀಡಲಾಗಿದೆ ಎಂದು ತಿಳಿಸಿದರು. ಈಗಾಗಲೇ ಕಿರಾಣಿ ಅಂಗಡಿಗಳ ನಂಬರ್‍ಗಳನ್ನು ಇಲಕಲ್ಲನ ಪ್ರಮುಖ ವ್ಯಾಟ್ಯಾಪ್ ಗ್ರುಪ್‍ಗಳಲ್ಲಿ ಹಾಕಿದ್ದು, ಸಮೀಪದ ಅಂಗಡಿಗಳಿಂದ ದಿನಬಳಿಗೆ ವಸ್ತಗಳನ್ನು ಹೋಮ್ ಡಿಲಿವರಿ ಪಡೆಯಬಹುದು ಎಂದು ತಿಳಿಸಿದರು. ಇಲಕಲ್ಲ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯಕ್ರಮಗಳನ್ನು ಯಶಸ್ವಿಮಾಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos