ವ್ಯಾಕ್ಸಿನ್ ಗುರಿ ತಲುಪಲು ತಹಶೀಲ್ದಾರ್ ಕರೆ

ವ್ಯಾಕ್ಸಿನ್ ಗುರಿ ತಲುಪಲು ತಹಶೀಲ್ದಾರ್ ಕರೆ

ಕೊಟ್ಟೂರು: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಪ್ರತಿ ಮನೆಗೆ ಹೋಗಿ ಕೊವೀಡ್ ಲಸಿಕೆಯನ್ನು ಹಾಕಿ ಕೊರೋನಾ ಮುಕ್ತವಾಗಿ ಎಲ್ಲರೂ ಸಹಕರಿಸ ಬೇಕು ಎಂದು ತಹಶೀಲ್ದಾರ್ ಕುಮಾರ್ ಸ್ವಾಮಿ ಹೇಳಿದರು. ಮಂಗಳವಾರ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ವ್ಯಾಕ್ಸಿನ್ ಹಾಕುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವ್ಯಾಕ್ಸಿನ್ ಹಾಕಿಸುವಲ್ಲಿ ತಾಲೂಕಿನ ಪ್ರಗತಿ ನಿರೀಕ್ಷಿತ ಮಟ್ಟಕ್ಕೆ ತಲುಪಿರುವುದಿಲ್ಲ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಪವನ್ ಕುಮಾರ್ ಮಲಪಾಟೆ ಅವರ ಆದೇಶದಂತೆ 15ರ ಒಳಗೆ ಶೇ.70 ರಷ್ಟು ಗುರಿ ಸಾಧಿಸುವಂತೆ ತಹಶೀಲ್ದಾರ್ ಸಲಹೆ ನೀಡಿದರು.

ತಾಲೂಕಿನಲ್ಲಿ ಇಲ್ಲಿಯವರೆಗೆ ಶೇ.56 ರಷ್ಟು ಗುರಿಯನ್ನು ಸಾಧಿಸಲಾಗಿದ್ದು, 15ರ ಒಳಗೆ ಶೇ.70 ರಷ್ಟು ಗುರಿ ಸಾಧಿಸ ಬೇಕಾದರೆ ಎಲ್ಲಾ ಪಿ ಹೆಚ್ ಸಿ ಕೇಂದ್ರದ ಸಿಬ್ಬಂದಿಯವರು ಪಿ ಹೆಚ್ ಸಿ ಕೇಂದ್ರಗಳನ್ನು ಬಿಟ್ಟು ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ತಂಡಗಳೊಂದಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಹಾಕಿ ಪ್ರಗತಿ ಸಾಧಿಸುವಂತೆ ಡಾ.ಷಣ್ಮುಖನಾಯ್ಕ , ಟಿ ಹೆಚ್ ಒ ಕೂಡ್ಲಿಗಿ ಅವರಿಗೆ ಖಡಕ್ಕಾಗಿ ತಹಶೀಲ್ದಾರ್ ಎಂ. ಕುಮಾರ್ ಸ್ವಾಮಿ ಆದೇಶ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos