ಟಿ.ಎನ್.ಶೇಷನ್ ವಿಧಿವಶ

ಟಿ.ಎನ್.ಶೇಷನ್ ವಿಧಿವಶ

ಚೆನ್ನೈ, ನ. 11 : ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್(86) ಕಳೆದ ರಾತ್ರಿ ವಿಧಿವಶರಾಗಿದ್ದಾರೆ.
1932ರಲ್ಲಿ ಕೇರಳದ ಪಾಲಕ್ಕಾಡ್ನಲ್ಲಿ ಡಿ. 15ರಂದು ಜನಿಸಿದ್ದ ಟಿ.ಎನ್. ಶೇಷನ್, ಭಾರತೀಯ ಆಡಳಿತ ಸೇವೆಗೆ ತಮಿಳುನಾಡು ಕೇಡರ್ನಿಂದ 1955ರಲ್ಲಿ ಸೇರ್ಪಡೆಗೊಂಡಿದ್ದರು. ಕೇಂದ್ರದಲ್ಲಿ ಕೆಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಟಿ.ಎನ್. ಶೇಷನ್ ಅವರ ಅಧಿಕಾರಾವಧಿಯಲ್ಲಿ ಅರ್ಹ ಮತದಾರರಿಗೆ ಗುರುತಿನ ಚೀಟಿ ಜಾರಿಗೆ ತರಲಾಯಿತು.
ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕರಾದ ಟಿ.ಎನ್. ಶೇಷನ್ ಡಿಸೆಂಬರ್ 12, 1990 ರಿಂದ ಡಿಸೆಂಬರ್ 11, 1996ರವರೆಗೆ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 1997ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ನಿಂದ ಕೆ.ಆರ್. ನಾರಾಯಣನ್ ಸ್ಪರ್ಧಿಸಿದ್ದರು. ಬೆಂಬಲ ಕೋರಿ ಶೇಷನ್ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅವರೇ ಬಡಿಸಲು ನಿಂತಿದ್ದ ಫೋಟೋ ಪ್ರಮುಖವಾಗಿ ಪ್ರಕಟವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos