ಶಂಕಿತ ಐಸಿಸ್ ಉಗ್ರ ಅರೆಸ್ಟ್

ಶಂಕಿತ ಐಸಿಸ್ ಉಗ್ರ ಅರೆಸ್ಟ್

ಬೆಂಗಳೂರು, ಫೆ. 26: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೆಲವು ನಗರಗಳಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವುದು ಹೆಚ್ಚಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಂಕಿತ ಐಸಿಸ್ ಭಯೋತ್ಪಾದಕನನ್ನ ಟ್ಯಾನಿಂಗ್ ರೋಡ್ನಲ್ಲಿ ಬಂಧಿಸಿದ್ದಾರೆ.

ಫಝಿ ಅಲಿಯಾಸ್ ಫಝಿಲ್ ಉರ್ ರೆಹಮಾನ್ ಬಂಧಿತ ಶಂಕಿತ ಉಗ್ರ. ಈತ ಅಲ್ ಹಿಂದ್ ಸಂಘಟನೆಯ ಮೆಹಬೂಬ್ ಪಾಷಾ ಮತ್ತು ಖ್ವಾಜಿ ಟೀಂ ಜೊತೆ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ.

ದೇಶದ ವಿವಿಧ ಭಾಗಳಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿ ಹಾಗೂ ಐಸಿಸ್ ಸಂಘಟನೆಯನ್ನ ಬಲಪಡಿಸುವ ನಿಟ್ಟಿನಿಂದ ದಕ್ಷಿಣ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ಇದರ ಜಾಡು ಹಿಡಿದು ಹೊರಟಿರುವ ಎನ್ಐಎ ತಂಡ, ಫೆಬ್ರವರಿ 24 ರಂದು ದೇಶದ ಹಲವು ಭಾಗಗಳಲ್ಲಿ ಶಂಕಿತ ಉಗ್ರರಿಗಾಗಿ ಶೋಧಕಾರ್ಯ ನಡೆಸಿತ್ತು. ಅಂತೆಯೇ ರಾಜ್ಯದಲ್ಲೂ ಶಂಕಿತ ಉಗ್ರರಿಗಾಗಿ ಹುಟುಕಾಟ ನಡೆಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos