ಸೂರ್ಯಕುಮಾರ್ ಯಾದವ್ ರವರಿಗೆ 33ನೇ ಹುಟ್ಟುಹಬ್ಬದ ಸಂಭ್ರಮ

ಸೂರ್ಯಕುಮಾರ್ ಯಾದವ್ ರವರಿಗೆ 33ನೇ ಹುಟ್ಟುಹಬ್ಬದ ಸಂಭ್ರಮ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಎನ್ನುವುದು ಒಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕ್ರಿಕೆಟ್ ನಲ್ಲಿ ಹಲವಾರು ಮಂದಿ ಅವರ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಅದೇ ತರಹ ಟೀಮ್ ಇಂಡಿಯಾಗೆ ಬಂದಂತಹ ಯುವ ಬ್ಯಾಟರಾದ ಸೂರ್ಯ ಕುಮಾರ್ ಯಾದವರು ಅತ್ಯಂತ ಯಶಸ್ವಿದಾಯಕ ಬ್ಯಾಟರ್ ಆಗಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸೂರ್ಯಕುಮಾರ್ ಯಾದವ್ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರನೇ ಹರಿದುಬರುತ್ತಿದೆ.
ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2023 ರ ಸೀಸನ್‌ನಲ್ಲಿ 180 ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ 600 ಪ್ಲಸ್ ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಓಪನರ್ ಆಗಿ ಅಲ್ಲದೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2022 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ T20I ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ‘SKY’ ಅತ್ಯುತ್ತಮ 117 ರನ್ ಗಳಿಸಿದ್ದರು.
ಸೂರ್ಯಕುಮಾರ್ ಯಾದವ್ 2022ರ ಒಂದು ವರ್ಷದಲ್ಲಿ 1,000 ಪ್ಲಸ್ ಅಂತರರಾಷ್ಟ್ರೀಯ ಟಿ20 ರನ್‌ಗಳನ್ನು ಗಳಿಸಿದ ಏಕೈಕ ಭಾರತೀಯರಾಗಿದ್ದಾರೆ. ಅವರು ಒಂದು ವರ್ಷದಲ್ಲಿ ಹೆಚ್ಚಿನ ಟಿ20 ಅಂತರರಾಷ್ಟ್ರೀಯ ಸಿಕ್ಸರ್‌ಗಳನ್ನು ಸಹ ಸಿಡಿಸಿದ್ದಾರೆ. ಒಟ್ಟು 68 ಸಿಕ್ಸರ್ ಬಾರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos