ಸುರಂಗ ಮಾರ್ಗಕ್ಕೆ ಬೀಗ

ಸುರಂಗ ಮಾರ್ಗಕ್ಕೆ ಬೀಗ

ಮಲ್ಲೇಶ್ವರಂ, ಆ. 6: ಗಾರ್ಮೆಂಟ್, ಬಟ್ಟೆ ಅಂಗಡಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ,ವ್ಯಾಪಾರಸ್ಥರು ಓಡಾಡುವ ಅತ್ಯಂತ ಜನ ಸಂಚಾರ ಮತ್ತು ವಾಹನಗಳ ಓಡಾಡುವ ಪ್ರದೇಶ ಮಲ್ಲೇಶ್ವರಂನ ಸಂಪಿಗೆ ರಸ್ತೆಯ ಮಹಾಕವಿ‌ ಕುವೆಂಪು ಸಕ೯ಲ್.

ಪಾದಾಚಾರಿಗಳ ಸುರಕ್ಷತೆ ದೃಷ್ಟಿಯಿಂದ  ಓಡಾಡಲು ಅಂಗನವಾಡಿ ರಸ್ತೆಯಿಂದ ಸಂಪಿಗೆ ರಸ್ತೆಗೆ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ.  ಸುರಂಗ ಮಾರ್ಗ ನಿರ್ಮಾಣ ಮಾಡಿ ಬೀಗ ಹಾಕಲಾಗಿದೆ.

ಸುರಂಗ ಮಾರ್ಗದ ಅಕ್ಕಪಕ್ಕದ ‌ಅಂಗಡಿ ಮಾಲೀಕರನ್ನು ಕೇಳಿದರೆ ಸುಮಾರು ಒಂದು ತಿಂಗಳಿಂದ ಬಾಗಿಲು ಹಾಕಲಾಗಿದೆ ಎಂದು ಹೇಳುತ್ತಾರೆ. ನಾವುಗಳು ಹಲವು ಸಾರಿ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದರೂ ಪ್ರಯೋಜನ ಆಗಿಲ್ಲ. ಸುರಂಗ ಮಾರ್ಗದ ಒಳಗಡೆ ರಾತ್ರಿ ವೇಳೆ ಸಂಚರಿಸಲು ಬೆಳಕಿನ ವ್ಯವಸ್ಥೆ ಮಾಡಿಲ್ಲ. ಕಳೆದ ಎರಡು ತಿಂಗಳ ಹಿಂದೆ ಎರಡು ಸರಗಳ್ಳತನ ಆಗಿದ್ದವು, ಹೀಗಾಗಿ ಮುಚ್ಚಿರಬಹುದು ಎಂದು ಪ್ರಾವಿಷನ್ ಸ್ಟೋರ್ ಮಾಲೀಕರಾ ರಮೇಶ್ ಬಾಬು.

ಸರ್ಕಾರ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಸುರಂಗ ಮಾರ್ಗದಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಓಡಾಡುವ ಅನುಕೂಲ ಕಲ್ಲಪಿಸದಿದ್ದರೆ ಯಾವ ಪುರುಷಾರ್ಥಕ್ಕಾದರೂ ಇಂಥಹ ಕಾಮಗಾರಿ ಕೆಲಸಗಳು ಮಾಡಬೇಕು ಎಂದು ಗಿರವಿ ಅಂಗಡಿ ಮಾಲೀಕ ಮೋತಿಲಾಲ್ ಎಂಬುವರು ಅಸಮದಾನ ವ್ಯಕ್ತಪಡಿಸಿದರು.

ಸರ್ಕಲ್ ನಲ್ಲಿ ಕರ್ತವ್ಯ ನಿರತ ಮಹಿಳಾ ಟ್ರಾಫಿಕ್ ಪೇದೆಯೊಬ್ಬರನ್ನು ಸುರಂಗ ಮಾರ್ಗ ಮುಚ್ಚಿರುವ ಬಗ್ಗೆ ಗಮನ ಸೆಳೆದಾಗ ಇಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ. ನಾವು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶಾಲಾ ಕಾಲೇಜು, ಕಾರ್ಮಿಕರು ಹೂವಿನ ವ್ಯಾಪಾರಿಗಳು, ಅತಿ ಹೆಚ್ಚು ಜನರು ಮತ್ತು ವಾಹನಗಳು ಇಲ್ಲಿ ಓಡಾಡುತ್ತವೆ. ಎಲ್ಲಾ ಬಿಎಂಟಿಸಿ ಬಸ್ಸುಗಳು ಮೆಜೆಸ್ಟಿಕ್ ಮಾರ್ಗದ ರಸ್ತೆ ಆಗಿರವುದರಿಂದ ವಿಪರೀತ ವಾಹನಗಳು, ಪಾದಚಾರಿಗಳು ಸಾಚಾರ ದಟ್ಟಣೆ ಇರುತ್ತದೆ. ಸಾರ್ವಜನಿಕರು ಮತ್ತು ಪುಟ್ ಪಾತ್ ಮೇಲೆ ಓಡಾಡುವ ಜನರ ಪ್ರಾಣ ರಕ್ಷಣೆ  ದೃಷ್ಟಿಯಿಂದ ಸುರಂಗ ಮಾರ್ಗದಲ್ಲಿ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದು ಹೆಸರೇಳಲಿಚ್ಚಿಸದ ಮಹಿಳಾ ಪೇದೆ ವಾಸ್ತವತೆ ಬಿಚ್ಚಿಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos