ಸಂಘಟನೆಗಳ ಜತೆ ಸಾರ್ವಜನಿಕರೂ ಬೆಂಬಲಿಸಿ

ಸಂಘಟನೆಗಳ ಜತೆ ಸಾರ್ವಜನಿಕರೂ ಬೆಂಬಲಿಸಿ

ಮಾಲೂರು: ರೈತರನ್ನು ಮತ್ತು ಕೃಷಿಯನ್ನು ರಕ್ಷಿಸುವ ಸಲುವಾಗಿ ೨೮ ರಂದು ಕರೆದಿರುವ ಕರ್ನಾಟಕ ಬಂದ್‌ಗೆ ಪ್ರಗತಿಪರ ಸಂಘಟನೆಗಳೊಟ್ಟಿಗೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಸಿ.ಲಕ್ಷ್ಮೀನಾರಾಯಣ ತಿಳಿಸಿದರು.

೨೮ ರಂದು ರೈತರನ್ನು ಮತ್ತು ಕೃಷಿಯನ್ನು ರಕ್ಷಿಸುವ ಸಲುವಾಗಿ ಹಮ್ಮಿಕೊಕೊಂಡಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ಗೆ ತಾಲ್ಲೂಕಿನ ರೈತ, ಜಾತಿಪರ, ಕನ್ನಡಪರ, ಕಾರ್ಮಿಕ ಪರ, ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಬೆಂಬಲಿಸಿ ರೈತರ ಪರ ನಿಲ್ಲಬೇಕು ಎಂದರು.

ಕರ್ನಾಟಕ ಬಂದ್‌ಗೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘ, ಹಸಿರು ಸೇನೆ, ಕರ್ನಾಟಕ ರೈತರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕರುನಾಡ ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ ಬಿ.ಕೃಷ್ಣಪ್ಪ ಬಣ), ಸಮಾಜ ಪರಿವರ್ತನಾ ಸಮಿತಿ, ದಲಿತ ಸಿಂಹ ಸೇನೆ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ, ಶಿವರಾಮೇಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕರವೇ ಅಲಗುರ್ಕಿ ಡಾ. ಚಲಪತಿ ಬಣ, ಜೈ ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ವಾಲ್ಮೀಕಿ ನಾಯಕ ಮಹಾಸಭಾ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗ, ಕಾರು ಮಾಲೀಕರ ಮತ್ತು ಚಾಲಕರ ಸಂಘ, ಪ್ರಜಾ ವಿಮೋಚನಾ ಚಳುವಳಿ, ಅಸಂಘಟಿತ ಕಾರ್ಮಿಕರ ಒಕ್ಕೂಟ, ದಲಿತ ನಾಗರೀಕ ಸಮಿತಿ, ಬೀದಿ ಬದಿ ವ್ಯಾಪಾರಸ್ಥರ ಸಂಘ, ಆಟೋ ಮಾಲೀಕರು ಮತ್ತು ಚಾಲಕರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos