ಹಾಸ್ಟೆಲ್ನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಹಾಸ್ಟೆಲ್ನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಬೆಂಗಳೂರು: ಪತ್ರಿಕೋದ್ಯಮ
ವಿದ್ಯಾರ್ಥಿನಿ ಕಾಲೇಜಿನ ಹಾಸ್ಟೆಲ್​ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ‌ಕೊತ್ತನೂರಿನ
ಕೆ.ನಾರಾಯಣಪುರ ಬಳಿಯ ಖಾಸಗಿ ಕಾಲೇಜಿನ ಹಾಸ್ಟೆಲ್​​ನಲ್ಲಿ ನಡೆದಿದೆ.

4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ಸೋಫಿಯಾ ದಮನಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಈಕೆ ಕಳೆದ 1 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು. ನಿನ್ನೆ ಬೆಳಗ್ಗೆ ಸಹಪಾಠಿಗಳ ಜೊತೆ ಮಾತಾನಾಡಿದ್ದ ಸೋಫಿಯಾ,  ನೀವು ಕಾಲೇಜಿಗೆ ಹೋಗಿ, ನಾನು ಬರೋದಿಲ್ಲ ಎಂದಿದ್ದಳಂತೆ. ಸಂಜೆ ಸಹಪಾಠಿಗಳು ಹಾಸ್ಟೆಲ್​​​​ಗೆ ವಾಪಸ್ ಬಂದಾಗ ಹಾಸ್ಟೆಲ್​ನ ತನ್ನ ಕೋಣೆಯ ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ.

ಮೃತದೇಹ ಕಂಡು ಅಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್​ಗೆ ತಿಳಿಸಿದ್ದರು. ಇನ್ನು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದಡಿ‌ ದೂರು ದಾಖಲಾಗಿದ್ದು‌, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಬೈಯಿಂದ ಸೋಫಿಯಾ ಪೋಷಕರು ಬರಬೇಕಿದೆ. ಈ ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಡಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನನಿಸಲಾಗಿದೆ. 

ಫ್ರೆಶ್ ನ್ಯೂಸ್

Latest Posts

Featured Videos