ಸಮರ್ಪಕ ಬರ ನಿರ್ವಹಣೆಗೆ ಆಗ್ರಹಿಸಿ ಕೃಷಿ ಕೂಲಿಕಾರರ ರಾಜ್ಯ ಮಟ್ಟದ ರ್ಯಾಲಿ

ಸಮರ್ಪಕ ಬರ ನಿರ್ವಹಣೆಗೆ ಆಗ್ರಹಿಸಿ ಕೃಷಿ ಕೂಲಿಕಾರರ ರಾಜ್ಯ ಮಟ್ಟದ ರ್ಯಾಲಿ

ಬೆಂಗಳೂರು: ಕೃಷಿ ಕೂಲಿಕಾರರಿಗಾಗಿ ಸಮಗ್ರ ಕಾನೂನು, ಕಲ್ಯಾಣ
ನಿಧಿ, ಸಮರ್ಪಕ ಬರ  ನಿರ್ವಹಣೆ ಸೇರಿ ಹಲವು ಬೇಡಿಕೆಗಳ
ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ಕೃಷಿ ಕೂಲಿಕಾರರ
ರಾಜ್ಯ ಮಟ್ಟದ ಬೃಹತ್‍ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ಇಂದು ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ ಬೃಹತ್ ಪ್ರತಿಭಟನಾ ರ್ಯಾಲಿ ಸ್ವಾಂತಂತ್ರ್ಯ ಉದ್ಯಾನವನಕ್ಕೆ ಮುಕ್ತಾಯವಾಯಿತು. ರ್ಯಾಲಿಯುದ್ಧಕ್ಕೂ ರಾಜ್ಯ ಹಾಗೂ ಕೇಂದ್ರ ಕೇಂದ್ರ ಸರ್ಕಾರಗಳ ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳ ಘೋಷಣೆಗಳು ಮೊಳಗಿದವು.

ಕೂಲಿಕಾರರಿಗಾಗಿ
ಸಮಗ್ರ ಕಾನೂನು, ಕಲ್ಯಾಣ ನಿಧಿ, ಸಮರ್ಪಕ ಬರ ನಿರ್ವಹಣೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು
ವಿಸ್ತರಿಸುವುದು ಮತ್ತು ಬಲಪಡಿಸಬೇಕು. ಸಮರ್ಪಕ ಸಾರ್ವತ್ರಿಕ ರೇಷನ್ ವ್ಯವಸ್ಥೆ ಜಾರಿಗೊಳಿಸಬೇಕು.
ಸಾಲ ಸೌಲಭ್ಯವನ್ನು ಒದಗಿಸಬೇಕು. ಅನಧೀಕೃತ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಬೇಕು ಎಂದು ಅಖಿಲ ಭಾರತ
ಕೃಷಿ ಕೂಲಿಕಾರರ ಸಂಘಟನೆ ಸಂಯೋಜಿತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಒತ್ತಾಯಿಸಿದೆ.

ಸಾಮಾಜಿಕ ಸುರಕ್ಷಾ
ಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು, ಆದಿವಾಸಿ ದಲಿತ,ಅಲ್ಪಸಂಖ್ಯಾತ ಬಡವರಿಗೆ ಕೃಷಿ ಭೂಮಿ
ವಿತರಿಸಬೇಕು. ದೌರ್ಜನ್ಯಕ್ಕೀಡಾಗುವ ದಲಿತ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಸಮಗ್ರವಾದ ಪುನರ್ವಸತಿ
ಪ್ಯಾಕೇಜ್ ಪ್ರಕಟಿಸಲು ಕೃಷಿ ಕೂಲಿಕಾರರ ಸಂಘಟನೆ ಆಗ್ರಹಿಸಿದೆ.

ಪ್ರತಿಭಟನಾ ರ್ಯಾಲಿಯಲ್ಲಿ ಕೃಷಿ ಕೂಲಿ ಕಾರರ ಸಂಘಟನೆ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಪ್ರಧಾನ ಕಾರ್ಯ ದರ್ಶಿ ಚಂದ್ರಪ್ಪ ಹೊಸಕೆರ. ಜಿ.ಎನ್.ನಾಗರಾಜ್‍,  ಪುಟ್ಟಮಾದು, ಕರಿಯಪ್ಪ ಅಚ್ಚೊಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos