RCB ತಂಡದಿಂದ ಸ್ಟಾರ್ ಆಟಗಾರ ಔಟ್!

RCB ತಂಡದಿಂದ ಸ್ಟಾರ್ ಆಟಗಾರ ಔಟ್!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್​ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅದರಂತೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ

ಏಕೆಂದರೆ ಕಳೆದ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಬದಲಿಗೆ ವಿಲ್ ಜಾಕ್ಸ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್​ವೆಲ್ ಹೊರಗುಳಿದರೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಆರ್​ಸಿಬಿ ತಂಡದಲ್ಲಿಲ್ಲ. ಹೀಗಾಗಿ ಔಟ್ ಆಫ್ ಫಾರ್ಮ್​ನಲ್ಲಿರುವ ಗ್ರೀನ್ ಅವರನ್ನೇ ಮತ್ತೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್​ಸಿಬಿ ಮುಂದಿದೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಆಡಿರುವ 6 ಇನಿಂಗ್ಸ್​ಗಳಿಂದ ಮ್ಯಾಕ್ಸಿ ಕಲೆಹಾಕಿದ್ದು ಕೇವಲ 32 ರನ್​ಗಳು ಮಾತ್ರ. ಈ ಆರು ಇನಿಂಗ್ಸ್​ಗಳಲ್ಲಿ ಅವರು ಕಲೆಹಾಕಿದ ಗರಿಷ್ಟ ಸ್ಕೋರ್ 28 ರನ್​ಗಳು. ಇನ್ನುಳಿದ 5 ಇನಿಂಗ್ಸ್​ಗಳಲ್ಲಿ ಕ್ರಮವಾಗಿ 0,1,0,3,0 ಗೆ ವಿಕೆಟ್ ಒಪ್ಪಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos