ಶ್ರೀನಗರ ಕಿಟ್ಟಿ ಸಹೋದರ ವಿಧಿವಶ

ಶ್ರೀನಗರ ಕಿಟ್ಟಿ ಸಹೋದರ ವಿಧಿವಶ

ಬೆಂಗಳೂರು: ಕನ್ನಡ ಚಿತ್ರನಟ ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್ ಬುಧುವಾರ ಹೃದಯಾಘಾತದಿಂದ ನಿಧನರಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಂತರ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ. ಶ್ರೀನಗರ ಕಿಟ್ಟಿ ಸಹೋದರ ಕೊರೋನಾದಿಂದ ಸಾವನ್ನಪ್ಪಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಲಾಕ್‌ಡೌನ್ ಘೋಷಣೆ ಪರಿಣಾಮ ಶೂಟಿಂಗ್ ಸಹ ಸ್ಥಗಿತವಾಗಿತ್ತು. ನಂತರ ಸರ್ಕಾರದ ಒಂದಿಷ್ಟು ಸೂಚನೆ ಮೂಲಕ ಚಿತ್ರೀಕರಣಕ್ಕೆ ಅನುವು ಮಾಡಿ ಕೊಟ್ಟಿದೆ. ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಯಲ್ಲಿದ್ದಾರೆ. ಈ ನಡುವೆ ಇದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos