ನಾನು ಮೋದಿ ಪರ, ಸುಧಾಕರ ಪರ ಅಲ್ಲ: ಎಸ್​.ಆರ್​ ವಿಶ್ವನಾಥ್

ನಾನು ಮೋದಿ ಪರ, ಸುಧಾಕರ ಪರ ಅಲ್ಲ: ಎಸ್​.ಆರ್​ ವಿಶ್ವನಾಥ್

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದು, ಹೈಕಮಾಂಡ್‌ ನಾಯಕರದಾರ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಡಾ.ಕೆ ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದ ಹಲವೆಡೆ ಗೋಬ್ಯಾಕ್​ ಸುಧಾಕರ್ ಎನ್ನುವ ಮಾತುಗಳ ಜೊತೆಗೆ ಅಭ್ಯರ್ಥಿ ಬದಲಾವಣೆ ಮಾಡಿ ಬೇರೆಯವರಿಗೆ ಕೊಡಿ ಎನ್ನುವ ಮಾತುಗಳು ಕೇಳಿಬರುತ್ತಿದೆ ಎಂದರು.

ಸಿಂಗನಾಯಕನಹಳ್ಳಿಯಲ್ಲಿರುವ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್​.ಆರ್​ ವಿಶ್ವನಾಥ್ ಏನೇ ಆದರೂ ನಾನು ನರೇಂದ್ರ ಮೋದಿ ಪರವಾಗಿ ಮತಕೇಳುತ್ತೇನೆ. ನಾನು ಸುಧಾಕರ್ ಪರವಾಗಿ ಮತ ಕೇಳೋದಿಲ್ಲ, ಸುಧಾಕರ್ ಜೊತೆ ನಾನು ವೇದಿಕೆ ಹಂಚಿಕೊಳ್ಳಲ್ಲ, ಸುಧಾಕರ್ ಜೊತೆ ಚುನಾವಣಾ ಪ್ರಚಾರ ಮಾಡಲ್ಲ, ನಾನು ನೇರವಾಗಿ ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿ ಪರವಾಗಿ ಮತಕೇಳುತ್ತೇನೆ. ಸುಧಾಕರ್ ಪರವಾಗಿ ಮತ ಕೇಳಲು ವೈಯುಕ್ತಿಕವಾಗಿ ನನಗೆ ಮುಜಗರ ಅಗುತ್ತದೆ.

ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಬೂತ್ ಮಟ್ಟದಲ್ಲಿ ಚುನಾವಣೆಗೆ ಸಿದ್ದತೆ ಮಾಡಲು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ ಸೋಲು ಗೆಲುವು ಭಗವಂತನಿಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos