ಹುಳಿಮಾವು: ಕೆರೆ ಕೋಡಿ ಒಡೆತ ಮೆತ್ತೆ ಸ್ಥಳೀಯರಲ್ಲಿ ಆತಂಕ

ಹುಳಿಮಾವು: ಕೆರೆ ಕೋಡಿ ಒಡೆತ ಮೆತ್ತೆ ಸ್ಥಳೀಯರಲ್ಲಿ ಆತಂಕ

ಹುಳಿಮಾವುನ, ನ. 28: ಅಧಿಕಾರಿಗಳ ಬೇಜವಾಬ್ದರಿತನವೋ ಅಥವಾ ಉದ್ದೇಶವೋ ಗೊತ್ತಿಲ್ಲ. ಆದರೆ ದೊಡ್ಡ ಕೆರೆ ಒಡೆದು ಅಲ್ಲಿನ ಸಾರ್ವಜನಿಕರು ಪರದಾಡುವುದಲ್ಲದೆ, ಬೀದಿಗೆ ಬಿದಿದ್ದಾರೆ. ಅದಕ್ಕೆ ಸರ್ಕಾರ ಹೊಣೆಯೋ? ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ತರೋ? ಎಂಬುದೇ ಯಕ್ಷಪ್ರಶ್ನೆ.

ಬೆಂಗಳೂರು ಹೊರವಲಯ ಹುಳಿಮಾವುನಲ್ಲಿ ಕೆರೆ ಸ್ವಚ್ಚ ಮಾಡಲು ನೀರನ್ನು ಹೊರಹಾಕುವ ಭರದಲ್ಲಿ ಕೆರೆ ಕೋಡಿಯನ್ನು ಒಡೆದು, ಈಗ ಅವ್ಯವಸ್ಥೆಗೆ ಕಾರಣವಾಗಿದೆ. ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಏಕಾಏಕಿ ಕೆರೆ ನೀರನ್ನು ಹೊರಹಾಕಲು ಹೋಗಿ ಕೋಡಿ ಹೊಡೆದಿರುವುದು ಸಾಕಷ್ಟು ಅವಾಂತರಕ್ಕೆ ಕಾರಣವಾಗಿದ್ದು, ಸ್ಥಳೀಯರ ಶಾಪಕ್ಕೆ ಅಧಿಕಾರಿಗಳು ತುತ್ತಾಗುತ್ತಿದ್ದಾರೆ.

ಕೆರೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅಲ್ಲಿನ ಸ್ಥಳೀಯರನ್ನು ಅಲ್ಲೋಲಕೊಲ್ಲೋಲ ಸೃಷ್ಠಿಸಿದ್ದು, 3ನೇ ದಿನಕ್ಕೆ ಕಾಲಿಟ್ಟಿದ್ದೆ. ಆದರೆ ಅದನ್ನು ಸರಿಮಾಡುವ, ಸರಿಯಾಗಿ ಪರಿಹಾರವನ್ನು ಕೊಡುವ ಗೋಜಿಗೆ ಸರ್ಕಾರ ಹೋಗಿಲ್ಲ. ಹೀಗಾಗಿ ಇಂದು ಹುಳಿಮಾವು ಕೆರೆಗೆ ಬಿಬಿಎಂಪಿ ಉಪಮೇಯರ್ ರಾಮ್ ಮೋಹನ್ ರಾಜು ಭೇಟಿ ನೀಡಿ ಮಾತನಾಡಿ, ಇದು ಪಾಲಿಕೆಯ ಜವಾಬ್ದಾರಿ ಅಲ್ಲ, ಎಂಜಿನಿಯರ್ ಯಾರಿಗೂ ತಿಳಿಯದಂತೆ ಕೆರೆ ನೀರು ಹರಿಯಲು ಕಟ್ಟೆಯನ್ನು ಸಡಿಸಲಾಗಿದ್ದು, ನೀರಿನ ಪ್ರಮಾಣ ಹೆಚ್ಚಾಗಿದ್ರಿಂದ ಸಂಪೂರ್ಣ ಕಟ್ಟೆ ಹೊಡೆದಿದೆ ಎಂದು ಉಪ ಮೇಯರ್ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮಾತನಾಡಿ, ಇದು ಎಂಜಿನಿಯರ್ ಮಾಡಿರುವ ಪ್ರಮಾದಕ್ಕೆ ದೊಡ್ಡ ಅನಾಹುತವೇ ನಡೆದುಹೋಗಿದೆ. ಅನಾಹುತವಾಗಿರುವ, ಮನೆಮಠ ಕಳೆದುಕೊಂಡಿರುವವರಿಗೆ ಸರ್ಕಾರ ಬೇಗ ಪರಿಹಾರ ನೀಡಬೇಕಾಗಿದೆ ಎಂದು ತಿಳಿಸಿದರು. ಅಲ್ಲದೆ ಅವರು ಸ್ಥಳದಲ್ಲೇ ಠಿಕ್ಕಾಣಿ ಹೀಡುದ್ದು, ಪರಿಹಾರ ಕಾರ್ಯ ನಡೆಸುತ್ತಿದ್ದಾರೆ.

ಒಟ್ಟು 630 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 319 ಮನೆಗಳು ಬಡವರ ಮನೆಗಳಾಗಿವೆ. ಅವರಿಗೆ ಇಂದು ಸಂಜೆಯೊಳಗೆ ಅವರ ಖಾತೆಗೇ 50 ಸಾವಿರ ಜಮೆ ಮಾಡಿಸ್ತಿನಿ, ಉಳಿದ ನೆರವು ಕಾರ್ಯಕ್ಕೆ ಅಧಿಕಾರಗಳ ಜೊತೆ ಚರ್ಚಿಸಿ ಕ್ರಮ ಕೈ ಗೊಳ್ಳುತ್ತೇವೆ. ಇಗಾಗಲೆ ಕೆರೆ ಒಡೆದಿದ್ದಕ್ಕೆ ತನಿಖೆ ಆಗುತ್ತಿದೆ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೆವೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಕೆರೆಯ ಕಟ್ಟೆ ಒಡೆದ ಪರಿಣಾಮ ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್ ಗಳಲ್ಲಿರುವ 2000ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರನ್ನು ಪೇಚಿಗೆ ಸಿಲುಕಿಸಿದೆ. ಇಂದು ಬೆಳಿಗ್ಗೆ ಕೆರೆಯ ನೀರನ್ನು ಬೇರೆಡೆಗೆ ಹರಿಸುವ ಕೆಲಸ ನಡೆಯುತ್ತಿದ್ದು, ನೀರನ್ನು ತಡೆಯಲು ಕಾರ್ಮಿಕರು ಹರಸಾಹ ಮಾಡುತ್ತಿದ್ದಾರೆ. ಆದರೆ ನೀರು ನಿಯಂತ್ರಣಕ್ಕೆ ಸಿಗದೆ ಪರಸ್ಥಿತಿ ಎದುರಾಗಿದ್ದು, ಮತ್ತಷ್ಟು ಮನೆಗಳು ಮುಳುಗಡೆಯಾಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ.  ಇದೇವೇಳೆ ಸ್ಥಳಕ್ಕೆ ಪಾಲಿಕೆಯ ಕಾರ್ಪೋರೆಟರ್ಸ್, ಕಮಿಷನರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos