ಫೆ.11ಕ್ಕೆ ಸೌಂದರ್ಯ ರಜನೀಕಾಂತ್ ಮದುವೆ

ಫೆ.11ಕ್ಕೆ ಸೌಂದರ್ಯ ರಜನೀಕಾಂತ್ ಮದುವೆ

ಸೂಪರ್‌ಸ್ಟಾರ್‌ ರಜನೀಕಾಂತ್‌ರ ಎರಡನೇ ಪುತ್ರಿ ಸೌಂದರ್ಯ, ಫೆಬ್ರವರಿ 11ರಂದು ನಟ ಮತ್ತು ಉದ್ಯಮಿ ವಿಶಾಗನ್‌ ವನಂಗಮುಡಿ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲಿದ್ದಾರೆ.

ಚೆನ್ನೈನ ಲಗ್ಷುರಿ ಹೋಟೆಲ್‌ವೊಂದರಲ್ಲಿ ನಡೆಯಲಿರುವ ಈ ಅದ್ಧೂರಿ ವಿವಾಹಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಸೌಂದರ್ಯ ಅವರು ಪ್ರಸಿದ್ಧ ಸೀರೆ ಮಳಿಗೆಯೊಂದರಲ್ಲಿ ಭರ್ಜರಿ ಸೀರೆಗಳನ್ನು ಶಾಪಿಂಗ್‌ ಮಾಡಿದ್ದಾರೆ.

ಫೆಬ್ರವರಿ 9ರಂದು ಮದುವೆ ಕಾರ್ಯಕ್ರಮಗಳು ಅಂದರೆ ಮೆಹೆಂದಿ, ಸಂಗೀತ್‌, ಪಾರ್ಟಿಗಳೆಲ್ಲಾ ಆರಂಭವಾಗಲಿವೆ. ರಜನಿ ಪತ್ನಿ ಲತಾ ಮತ್ತು ಪ್ರಥಮ ಪುತ್ರಿ ಐಶ್ವರ್ಯಾ ಈಗಾಗಲೇ ಮದುವೆ ಕೆಲಸಗಳಿಗಾಗಿ ಓಡಾಡುತ್ತಿದ್ದಾರೆ.

ಸಿನಿಮಾ ನಿರ್ಮಾಪಕಿಯಾಗಿಯೂ ಆಗಿರುವ ಸೌಂದರ್ಯರ ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿದ್ದು, ಅವರಿಗೆ ಐದು ವರ್ಷದ ಮಗನಿದ್ದಾನೆ. ವಿಶಾಗನ್‌ ಕೂಡಾ ಡಿವೋರ್ಸಿಯಾಗಿದ್ದು ಇವರಿಬ್ಬರ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. 

ಫ್ರೆಶ್ ನ್ಯೂಸ್

Latest Posts

Featured Videos