ಸ್ಮಿತ್ ಗೆ ಸಡ್ಡು ಹೊಡೆದ ಕೊಹ್ಲಿ!

ಸ್ಮಿತ್ ಗೆ ಸಡ್ಡು ಹೊಡೆದ  ಕೊಹ್ಲಿ!

ಪುಣೆ, ಅ. 11 : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ದಾಖಲೆಯ 7ನೇ ದ್ವಿಶತಕ ಸಿಡಿಸಿ ಹಲವು ದಾಖಲೆ ಪುಡಿಗಟ್ಟಿದ್ದಾರೆ. 7000 ರನ್ಗಳ ಮೈಲುಗಲ್ಲು ಮುಟ್ಟುವ ಮೂಲಕ, ಆಸ್ಟ್ರೇಲಿಯಾದ ಮಾಜಿ ನಾಯಕ ಡಾನ್ ಬ್ರಾಡ್ಮಾನ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ.
138 ಇನಿಂಗ್ಸ್ಗಳಲ್ಲಿ 7 ಸಾವಿರ ರನ್ಗಳ ಮೈಲುಗಲ್ಲು ಮುಟ್ಟುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ ಅಲಂಕರಿಸಿದ್ದಾರೆ.
ಡೊನಾಲ್ಡ್ ಬ್ರಾಡ್ಮನ್, 52 ಪಂದ್ಯಗಳಲ್ಲಿ ಆಡಿದ 80 ಇನಿಂಗ್ಸ್ಗಳಿಂದ 6996 ರನ್ಗಳಿಗೆ ತಮ್ಮ ಟೆಸ್ಟ್ ವೃತ್ತಿ ಬದುಕು ಅಂತ್ಯಗೊಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos