ವಿಶೇಷ ಚೇತನರ ಕೌಶಲ ತರಬೇತಿ

ವಿಶೇಷ ಚೇತನರ ಕೌಶಲ ತರಬೇತಿ

ಬೆಂಗಳೂರು, ಫೆ. 22: ರಾಜ್ಯ ಹಾಗೂ ವಿದೇಶಗಳಲ್ಲಿ ವಿಶೇಷ ಚೇತನರಿಗೆ ಕೌಶಲ ತರಬೇತಿ ನೀಡಿ ಉದ್ಯೋಸ್ಥರನ್ನು ಮಾಡುತ್ತಿರು ಸಮರ್ಥನಂ ಟ್ರಸ್ಟ್ನ ಸೇವೆ ಅತ್ಯಂತ ಮಹತ್ವ ಪೂರ್ಣ ಹಾಗೂ ಶ್ಲಾಘನೀಯವೆಂದು ಕೇಂದ್ರ ರಸಗೊಬ್ಬರ  ಖಾತೆ ಸಚಿವ ಡಿ ವಿ ಸದಾನಂದ ಗೌಡ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದರು.

ನಗರದ ಹೆಚ್ ಎಸ್‌ಆರ್‌ಲೇ ಔಟ್ ಅಗರದಲ್ಲಿರುವ ವಿಶೇಷ ಚೇತನರ ಕೌಶಲ ತರಬೇತಿ ಕೇಂದ್ರ ಸಮರ್ಥನಂ ಟ್ರಸ್ಟ್ನ 23ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಆಂಧ್ರಪ್ರದೇಶ ಸೇರಿದಂತೆ ವಿದೇಶಗಳಲ್ಲಿ ವಿಶೇಷ ಚೇತನರಿಗೆ ಬದುಕು ರೂಪಿಸುವ ನಿಟ್ಟಿನಲ್ಲಿ ಸಮರ್ಥನಂ ಸಂಸ್ಥೆ ಮುಂದಾಗಿರುವುದು ಉತ್ತಮ ಬೆಳವಣಿಗೆಯೆಂದರು.

ನಮ್ಮಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ನಾವು ಶಿಕ್ಷೆಯಿಂದ ಮುಕ್ತಗೊಳಿಸಲು ದೇವರು ಮೆಚ್ಚುವಂತಹ ಕೆಲಸ ಕಾರ್ಯಗಳಲ್ಲಿ ತೊಡಗುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಕೆಲಸವಾಗಬೆಕಿದ್ದು,ಈ ನಿಟ್ಟಿನಲ್ಲಿ ಸಮರ್ಥನಂ ಟ್ರಸ್ಟ್ ಮಾಡುತ್ತಿರುವುದು ಅಭಿನಂದನಾರ್ಹವೆಂದರು.

ನನ್ನ ಇಲಾಖೆ ಸಾರ್ವಜನಿಕವಾಗಿ ಯಾವುದೇ ಸಮಸ್ಯೆಗಳಿದ್ದರೆ ಶಾಸಕ ಸತೀಶ್ ರೆಡ್ಡಿಯವರ ಮೂಲಕ ನನ್ನ ಗಮನಕ್ಕೆ ತರಲು ಸೂಚಿಸಿದ ಸಚಿವ ಸದಾನಂದಗೌಡ ಅವರು ಮಾರ್ಚ್ ನಂತರ ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಸರ್ಕಾರದಿಂದ ನೆರವು ನೀಡುವ ಭರವಸೆ ನೀಡಿದರು. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಒಂದೇ ಸೂರಿನಡಿ ಅತ್ಯುತ್ತಮ ಲೈಬ್ರರಿ ಕಲ್ಪಿಸಿ ಉಚಿತ ಕಂಪ್ಯೂಟರ್, ಟೈಲರಿಂಗ್, ಬ್ಯೂಟೀಶಿಯನ್ ಸೇರಿದಂತೆ ಹಲವು ರಿತಿಯ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡುತ್ತಿರುವ ಸಮರ್ಥನಂ ಟ್ರಸ್ಟ್ ಸೇವೆ ಅನನ್ಯವಾದುದೆಂದರು.

ಬೊಮ್ಮನಹಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, ಸಮರ್ಥನಂ ಸಂಸ್ಥೆ ಕಳೆದ 23 ವರ್ಷಗಳಿಂದ ಸುಮಾರ ಐವತ್ತು ಸಾವಿರ ವಿಶೇಷ ಚೇತನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಹಲವು ರೀತಿಯ ಉದ್ಯೋಗಾಧಾರಿತ  ಉಚಿತ ಕೌಶ¯ ತರಬೇತಿ ನೀಡುವ ಮೂಲಕ ಭವಿಷ್ಯ ರೂಪಿಸಿರುವುದು ಶ್ಲಾಘನೀಯವೆಂದರು

ಮಕ್ಕಳ ತಂದೆ ತಾಯಂದಿರು ಮಾಡಿದ ತಪ್ಪಿಗಾಗಿ ಮಕ್ಕಳು ಇಂದು ಅಂಗವೈಕಲ್ಯ ಪೀಡಿತರಾಗುತ್ತಿರುವುದಕ್ಕೆ ವಿಷಾದವ್ಯಕ್ತಪಡಿಸಿದ ಶಾಸಕ ಸತೀಶ್ ರೆಡ್ಡಿ ಅವರು ಸಮರ್ಥನಂ ಟ್ರಸ್ಟ್ನ ಮಹಂತೇಶ್ ನೀಡುತ್ತಿರುವ ಸೇವೆ ಅತ್ಯಂತ ಮಹತ್ವವಾದುದೆಂದರು.

ಸಮರ್ಥನಂ ಟ್ರಸ್ಟಿನ ಸಂಸ್ಥಾಪಕ ಟ್ರಸ್ಟಿ ಮಹಂತೇಶ್ ಜಿಕೆ ಮಾತನಾಡಿಕಳೆದ 23 ವರ್ಷಗಳಲ್ಲಿ 50 ಸಾವಿರ ವಿಶೇಷ ಚೇತನ ಯುವಕ ಯುತಿಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಳ್ಳುವಷ್ಟರ ಮಟ್ಟಿಗೆ ಕೌಶಲ ತರಬೇತಿ ನೀಡಿ ಸ್ವಯಂ ಉದ್ಯೋಗದ ಜತೆಯಲ್ಲಿ ಹಲವು ಉನ್ನತ ಮಟ್ಟದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತರಬೇತಿ ನೀಡಿದ ಹೆಮ್ಮೆ ನಮ್ಮ ಟ್ರಸ್ಟಿನದೆಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ  ವಿಶೇಷ ಚೇತನ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡುವ ದ್ಯೇಯ ಇದೆ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos