ಆರು ಜನರ ಜೀವ ಉಳಿಸಿ, ಸಾವಿನಲ್ಲಿ ಸಾರ್ಥಕತೆ ಮೆರೆದ ಪುಟ್ಟ ಬಾಲಕ

ಆರು ಜನರ ಜೀವ ಉಳಿಸಿ, ಸಾವಿನಲ್ಲಿ ಸಾರ್ಥಕತೆ ಮೆರೆದ ಪುಟ್ಟ ಬಾಲಕ

ಚೆನ್ನೈ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಎರಡು ವರ್ಷದ ಬಾಲಕನಿಗೆ ಹೃದಯ ಕಸಿ ಮಾಡುವ ಮೂಲಕ ಚೆನ್ನೈನ ಆಸ್ಪತ್ರೆಯೊಂದು ಗಮನ ಸೆಳೆದಿದ್ದು, ಜೊತೆಗೆ ಈತನಿಗೆ ಹೃದಯದಾನ ಮಾಡಿದ ಬಾಲಕ ಭಾರತದ ಅತಿ ಕಿರಿಯ ಹೃದಯ ದಾನಿ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ. ಚೆನ್ನೈನ ಫೋರ್ಟಿಸ್ ಮಲರ್ ಹಾಸ್ಪಿಟಲ್‍ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, 2 ವರ್ಷದ ಬಾಲಕನಿಗೆ ಅಷ್ಟೇ ವರ್ಷದ ಬಾಲಕನ ಹೃದಯವನ್ನು ಕಸಿ ಮಾಡಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನಿಗೆ ಫೆ.10 ರಂದು ಮೆದುಳು ಹಾನಿಗೆ ಒಳಗಾಗಿದ್ದ ಮುಂಬೈನ ಎರಡು ವರ್ಷದ ಬಾಲಕ ಹೃದಯವನ್ನು ಏರ್‌ ಲಿಫ್ಟ್ ಮಾಡಿ ತಂದು ಈ ಕಸಿ ನಡೆಸಲಾಗಿದೆ. ಈ ಮುಂಬೈ ಬಾಲಕನ ಹೃದಯ ಮಾತ್ರವಲ್ಲದೆ ಇತರ ಅಂಗಾಂಗಗಳ ದಾನದಿಂದಾಗಿ ಒಟ್ಟು ಆರು ಜನರ ಜೀವ ಉಳಿದಂತಾಗಿದ್ದು, ಕುಟುಂಬದವರು ಅಂಗಾಂಗ ದಾನಕ್ಕೆ ಮನಸ್ಸು ಮಾಡಿದ್ದರಿಂದ ಬಾಲಕ ಸಾವಿನಲ್ಲೂ ಸಾರ್ಥಕತೆ ಮೆರೆದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos