ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ರೂಢಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ರೂಢಿಸಿಕೊಳ್ಳಬೇಕು.

ಪೀಣ್ಯದಾಸರಹಳ್ಳಿ, ಆ. 6: ‘ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸಮಯ ಪಾಲನೆ ಜೊತೆಗೆ ಉತ್ತಮ ಶಿಕ್ಷಣದಿಂದ ಮಾತ್ರ ಒಳ್ಳೆಯ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಕೆ.ರವಿ ಹೇಳಿದರು.

ಜಾಲಹಳ್ಳಿಯ ಸೆಂಟ್ ಕ್ಲಾರೆಟ್ ಕಾಲೇಜಿನ 2019-20ರ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತಮ ನಾಗರೀಕತ್ವ ಪಡೆದುಕೊಳ್ಳಲು ಶಿಸ್ತು ಮುಖ್ಯವಾಗುತ್ತದೆ’ ಎಂದರು. ಪ್ರಾಂಶುಪಾಲ ಡಾ. ಸಾಬುಜಾರ್ಜ್ ‘ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಿ, ಶ್ರದ್ಧೆ, ಭಕ್ತಿಯಿಂದ ಕಲಿತರೆ ರಾಷ್ಟ್ರದ ನಿರ್ಮಾಣಕ್ಕೆ ದಾರಿದೀಪವಾಗುತ್ತದೆ’ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಸಮಾರಂಭದಲ್ಲಿ  ಪ್ರಾಂಶುಪಾಲ ಡಾ. ಸಾಬುಜಾರ್ಜ್, ಉಪಪ್ರಾಂಶುಪಾಲರು ರೆ.ಫಾದರ್ ಅಬ್ರಹಾಂ ಪಿ.ಜೆ, ಭಾಷೆಗಳ ಮುಖ್ಯಸ್ಥ ಮಾದೇಶ್.ಎನ್, ಕೆಸೆಂಡರ್ ರಾಣಿ, ಮರಿಯಾ ಡಿಸೋಜ್, ಜಯಲಕ್ಷ್ಮೀ, ಸೀಮಾ ಜೋಸೆಫ್, ತ್ರಿಯೋಗಿನಾಥ ಪಾಂಡೆ ಮತ್ತಿತರರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos