ಇಂದು ಶುಭ್ಮನ್ ಗಿಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಶುಭ್ಮನ್ ಗಿಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಎನ್ನುವುದು ಚಿಕ್ಕ ಕ್ರೀಡೆಯಾಗಿ ಉಳಿದಿಲ್ಲ ಒಂದು ದೊಡ್ಡ ಕ್ರೀಡೆಯಾಗಿ ಬೆಳೆದಿದೆ, ಕ್ರಿಕೆಟ್ ಎನ್ನುವುದು ನಮ್ಮ ಎಮೋಷನ್ ಆಗಿದೆ.
ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದೇ ಹೇಳಲಾಗುವ ಯುವ ಬ್ಯಾಟರ್ ಶುಭ್ಮನ್ ಗಿಲ್ ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಗಿಲ್ ಸದ್ಯ ಭಾರತ ಪರ ಏಷ್ಯಾಕಪ್ನಲ್ಲಿ ಆಡುತ್ತಿದ್ದು, ಕೊಲಂಬೊದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಗಿಲ್ ಅವರು 1999, ಸೆಪ್ಟೆಂಬರ್ 8 ರಂದು ಪಂಜಾಬ್ನ ಫಝಿಕಾ ನಗರದಲ್ಲಿ ಜನಿಸಿದರು.
ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಗಿಲ್ ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಜನವರಿ 31, 2019 ರಂದು ಭಾರತೀಯ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಬಳಿಕ 2020ರಲ್ಲಿ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡಿ, ಟಿ20 ಲೋಕಕ್ಕೂ ಕಾಲಿಟ್ಟ ಇಂದು ಭಾರತದ ಸ್ಟಾರ್ ಬ್ಯಾಟರ್ ಆಗಿದ್ದಾರೆ. ಇಲ್ಲಿದೆ ನೋಡಿ ಗಿಲ್ ನಿರ್ಮಿಸುವ ಪ್ರಮುಖ ದಾಖಲೆಗಳು.
ಶುಭ್ಮನ್ ಗಿಲ್ ಈ ವರ್ಷದ ಆರಂಭದಲ್ಲಿ ನ್ಯೂಝಿಲೆಂಡ್ ವಿರುದ್ಧ ತಮ್ಮ ಚೊಚ್ಚಲ T20I ಶತಕವನ್ನು ಸಿಡಿಸಿದ ನಂತರ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಸೆಂಚುರಿ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರರ ಎಂಬ ದಾಖಲೆ ಬರೆದರು. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಆಟಗಾರರಾದರು.
ಮೊನ್ನೆಯಷ್ಟೆ ಏಷ್ಯಾಕಪ್ 2023 ರಲ್ಲಿ ಕ್ಯಾಂಡಿಯಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ 67 ರನ್ ಗಳಿಸಿದ ನಂತರ, ಗಿಲ್ ಅವರು 1500 ಏಕದಿನ ರನ್‌ಗಳನ್ನು ವೇಗವಾಗಿ ಗಳಿಸಿದ ಬ್ಯಾಟರ್ ಆದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಶುಭ್‌ಮನ್ ಕಿರಿಯ ಆರೆಂಜ್ ಕ್ಯಾಪ್ ವಿಜೇತರಾಗಿದ್ದಾರೆ. ಐಪಿಎಲ್ 2023 ರಲ್ಲಿ 851 ರನ್‌ಗಳೊಂದಿಗೆ, ಅವರು 23 ನೇ ವಯಸ್ಸಿನಲ್ಲಿ ಈ ದಾಖಲೆಯನ್ನು ಮಾಡಿದರು. 2021 ರಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ರುತುರಾಜ್ ಗಾಯಕ್ವಾಡ್ ದಾಖಲೆ ಪುಡಿಗಟ್ಟಿದರು.

ಫ್ರೆಶ್ ನ್ಯೂಸ್

Latest Posts

Featured Videos