ಶುಭ ಕೋರಿದರು ಸಿಎಂ..? ಗಲಿಬಿಲಿಗೊಂಡರು ಸಹೋದ್ಯೋಗಿಗಳು!?

ಶುಭ ಕೋರಿದರು ಸಿಎಂ..? ಗಲಿಬಿಲಿಗೊಂಡರು ಸಹೋದ್ಯೋಗಿಗಳು!?

ಬೆಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಸ್ವಲ್ಪ ದಿನ ರಿಲ್ಯಾಕ್ಸ್ ತೆಗೆದುಕೊಂಡ ರಾಜ್ಯ ಸರ್ಕಾರದ ನಾಯಕರು ನಿನ್ನೆ ಸಚಿವ ಸಂಪುಟ ಸಭೆ ನಡೆಸಿದ್ರು. ಸಂಪುಟ ಸಭೆಗೆ ಸಚಿವರೆಲ್ರೂ ಬಂದಿದ್ದರು. ಹಾಗೆಯೇ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಕೂಡ ಆಗಮಿಸಿದ್ದರು. ‘ಸರ್ಕಾರದ ಮುಂದಿನ ಕಾರ್ಯಕ್ರಮಗಳೇನು? ಯಾವೆಲ್ಲಾ ಯೋಜನೆಗಳನ್ನ ಅನುಷ್ಠಾನ ಮಾಡಬೇಕು? ಬರ ಪರಿಹಾರಕ್ಕೆ ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು? ಅನ್ನೋದ್ರ ಬಗ್ಗೆ ಸಭೆಯಲ್ಲಿ ಇನ್ನೇನು ಚರ್ಚೆ ಆಗಬೇಕಷ್ಟೇ. ಅಷ್ಟೊತ್ತಿಗೆ ಸಿಎಂ ಕುಮಾರಸ್ವಾಮಿ ಅವರ ದೃಷ್ಟಿ ಕೃಷ್ಣ ಬೈರೇಗೌಡರ ಮೇಲೆ ಬೀಳುತ್ತೆ. ಕೃಷ್ಣಬೈರೇಗೌಡರತ್ತ ಮುಖ ಮಾಡಿದ ಸಿಎಂ, ”ನನ್ನ ಕಡೆಯಿಂದ ನಿಮಗೆ ಹಾರ್ದಿಕ ಶುಭಾಶಯಗಳು” ಅಂತಾ ಹೇಳಿದ್ರು. ಸಿಎಂ ಕುಮಾರಸ್ವಾಮಿ ಸಚಿವರಿಗೆ ವಿಶ್ ಮಾಡಿದ್ದೇ ತಡ, ಇದೇನಿದು ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಬೈರೇಗೌಡರಿಗೆ ಯಾಕೆ ಸಿಎಂ ವಿಶ್ ಮಾಡಿದ್ರು? ಅಂತಾ ಉಳಿದ ಸಚಿವರೆಲ್ಲಾ ತಬ್ಬಿಬ್ಬಾದ್ರು. ಇನ್ನೂ ಕೆಲವ್ರು ಕೂತಲ್ಲಿಯೇ ಅಂತೆ, ಕಂತೆ ಮಾತುಗಳನ್ನ ಆಡಲು ಆರಂಭಿಸಿದ್ರು. ”ಮುಖ್ಯಮಂತ್ರಿಗಳೇ ಕೃಷ್ಣಬೈರೇಗೌಡರಿಗೆ ಶುಭಕೋರಿದ್ದೇಕೆ? ವಸಿ ನಮ್ಗೂ ಯಾಕೆ ಅಂತಾ ಹೇಳಿ, ನಾವೂ ತಿಳ್ಕೋತೀವಿ” ಅಂತಾ ಸಿಎಂಗೆ ನೇರವಾಗಿ ಪ್ರಶ್ನೆಯನ್ನ ಎಸೆದ್ರು. ಅದಕ್ಕೆ ಸಿಎಂ ಕುಮಾರಸ್ವಾಮಿ ಹಾಸ್ಯ ಚಟಾಕಿ ಹಾರಿಸುತ್ತ, ”ಶುಭಕೋರಲು ಕಾರಣವಿದೆ. ಅದು ನನಗೂ ಗೊತ್ತು, ಕೃಷ್ಣಬೈರೇಗೌಡರಿಗೂ ಗೊತ್ತು’ ಅಂತಾ ನಕ್ಕರು. ಮತ್ತೆ ಉಳಿದ ಸಚಿವರೆಲ್ಲಾ ಏನಿರಬಹುದು? ಏನಿರಬಹುದು ಅಂತಾ ತಲೆ ಕೆಡಿಸಿಕೊಂಡ್ರು. ಆಗ, ನಿಧಾನಕ್ಕೆ ಉತ್ತರಿಸಿದ ಸಿಎಂ, ”ಈಗಷ್ಟೇ ಲೋಕಸಭೆ ಚುನಾವಣೆ ಮುಕ್ತಾಯ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕೃಷ್ಣಬೈರೇಗೌಡ್ರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಅವರು ಜಯಗಳಿಸುತ್ತಾರೆ ಎಂಬ ನಿಖರ ಮಾಹಿತಿ ನನಗೆ ಸಿಕ್ಕಿದೆ. ಹೀಗಾಗಿ ಫಲಿತಾಂಶ ಘೋಷಣೆಗೂ ಮುನ್ನವೇ ಶುಭ ಕೋರಿದ್ದೇನೆ” ಅಂತಾ ಹೇಳಿದ್ರು. ನಂತರ ಉಳಿದ ಸಚಿವರೆಲ್ಲ ನಿಟ್ಟುಸಿರು ಬಿಟ್ರು. ಸಿಎಂ ಕುಮಾರಸ್ವಾಮಿ ಶುಭಕೋರಿದ ಕಾರಣ ಅರಿತು ಎಲ್ಲಾ ಸಚಿವರು ಸಂತಸ ಪಟ್ರು. ಜೊತೆಗೆ ಶುಭಕೋರಿದ ಮುಖ್ಯಮಂತ್ರಿಗಳಿಗೆ ಕೃಷ್ಣಬೈರೇಗೌಡ ಸಭೆಯಲ್ಲೇ ಧನ್ಯವಾದ ತಿಳಿಸಿದ್ರು. ಇಷ್ಟೆಲ್ಲಾ ಆದ ಬಳಿಕ ಎಂದಿನಂತೆ ಸಚಿವ ಸಂಪುಟ ಸಭೆ ಮುಂದುವರಿಯಿತು.

ಫ್ರೆಶ್ ನ್ಯೂಸ್

Latest Posts

Featured Videos