ಭಿನ್ನ ವಿಭಿನ್ನ ಅರ್ಥಗಳನ್ನ ಕಲ್ಪಿಸಿದ ನಟಿ ಶ್ರದ್ಧಾ ಶ್ರೀನಾಥ್ ಹೇಳಿಕೆ..!?

ಭಿನ್ನ ವಿಭಿನ್ನ ಅರ್ಥಗಳನ್ನ ಕಲ್ಪಿಸಿದ ನಟಿ ಶ್ರದ್ಧಾ ಶ್ರೀನಾಥ್ ಹೇಳಿಕೆ..!?

ಬೆಂಗಳೂರು, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಶ್ರದ್ಧಾ ಶ್ರೀನಾಥ್  ಸಮಂತಾ ಬಗ್ಗೆ ಕೊಟ್ಟ ಹೇಳಿಕೆ ಬಿಸಿ, ಕಡಿಮೆಯಾಗುವ ಮೊದ್ಲೇ ಯಶ್ ಬಗ್ಗೆ ಆಕೆ ಆಡಿರೋ ಮಾತುಗಳು ಸಣ್ಣದಾಗಿ ವಿವಾದ ಸೃಷ್ಟಿಸಿದೆ. ಅಷ್ಟಕ್ಕೂ  ಶ್ರದ್ಧಾ ಶ್ರೀನಾಥ್​ಗೆ ಎದುರಾದ ಪ್ರಶ್ನೆ ಏನೆಂದರೆ, ಯಶ್​ ಮತ್ತು ನಾನಿ ಇಬ್ಬರು ಸೆಲ್ಫ್ ಮೇಡ್ ಸ್ಟಾರ್ಸ್. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡ್ಕೋಬೇಕು ಅಂದ್ರೆ ಯಾರನ್ನ ಆಯ್ಕೆ ಮಾಡ್ಕೊತೀರಾ..?  ಎಂದಿತ್ತು. ಅದಕ್ಕೆ ಉತ್ತರಿಸಿದ ಶ್ರದ್ಧಾ “ನಟಿಯಾಗಿ ನಾನು ನಾನಿ ಜೊತೆ ನಟಿಸಿದ್ದೀನಿ. ಹಾಗಾಗಿ ನಾನಿ ಅವರನ್ನ ಆಯ್ಕೆ ಮಾಡ್ಕೊತೀನಿ. ಯಶ್ ಸಹ ಸೆಲ್ಫ್​ ಮೇಡ್. ಅವರ ಹಿನ್ನೆಲೆ ನನಗೆ ನೆನಪಿದೆ. ಕಿರುತೆರೆ ಧಾರಾವಾಹಿ ಮೂಲಕ ಅವರು ಕರಿಯರ್ ಶುರು ಮಾಡಿದ್ರು. ಆ ಧಾರಾವಾಹಿ ಸೆಟ್​ಗೆ ಭೇಟಿ ಕೊಟ್ಟಿದ್ದ ನನ್ನ ಸ್ನೇಹಿತರೊಬ್ಬರು ಹೇಳಿದ್ರು, ಯಾರೊ ಪ್ರೊಡಕ್ಷನ್ ಹುಡುಗ ಅವರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲವಂತೆ. ಆಗ ಯಶ್ ಹೇಳ್ತಿದ್ರಂತೆ ಪರವಾಗಿಲ್ಲ, ಈಗ ಆತ ಯಾವ ರೀತಿ ನಡೆಸಿಕೊಳ್ತಾನೆ ಅನ್ನೋದು ಲೆಕ್ಕಕ್ಕೆ ಬರಲ್ಲ, ನಾನು ದೊಡ್ಡ ವ್ಯಕ್ತಿ ಆದಾಗ ನೋಡ್ತೀನಿ ಆತ ಯಾವ ರೀತಿ ನಡೆಸಿಕೊಳ್ತಾನೆ   ಅಂತ. ಈಗ ನೋಡಿ ಅವರು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಯಶ್ ಕನ್ನಡದಲ್ಲಿ ಬಿಗ್ಗೆಸ್ಟ್ ಹಿಟ್​ಗಳನ್ನ ಕೊಟ್ಟಿರೋ ನಟ. ಕನ್ನಡ ಸಿನಿಮಾವನ್ನ ಇಡೀ ಭಾರತಕ್ಕೆ ಪರಿಚಯಿಸಿದ್ದಾರೆ. ನಾನು ಒಮ್ಮೆ ಅವರನ್ನ ಭೇಟಿಯಾಗಿದ್ದೀನಿ. ಹಾಗಾಗಿ ಅವರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹಾಗಾಗಿ ನನ್ನ ಆಯ್ಕೆ ನಾನಿ.” ಇಷ್ಟೆ ಶ್ರೀನಾಥ್ ಹೇಳಿದ್ದು ಇಷ್ಟೆ. ಆದ್ರೆ ಈ ವಿಚಾರ ನಾನಾ ಅರ್ಥ ಪಡ್ಕೊಂಡು, ಭಿನ್ನ ವಿಭಿನ್ನ ಅರ್ಥಗಳನ್ನ ಕಲ್ಪಿಸಿ, ವಿವಾದವನ್ನ ಸೃಷ್ಟಿಸಿಬಿಟ್ಟಿದೆ.. ಯಶ್ ಬದಲು ನಾನಿಗೆ ಶ್ರದ್ಧಾ ಜೈ ಅಂದ್ರಂತೆ..ಯಶ್ ಜೊತೆ ನಟಿಸಲ್ಲ, ನಾನಿ ಜೊತೆ ನಟಿಸ್ತೀನಿ ಅಂದ್ರಂತೆ.. ಹೀಗೆ ಶ್ರದ್ಧಾ ಶ್ರೀನಾಥ್ ಹೇಳಿಕೆ ನಾನಾ ಅರ್ಥಗಳನ್ನ ಪಡೆದುಕೊಂಡು ಸಣ್ಣದಾಗಿ ವಿವಾದ ಕಿಚ್ಚು ಹಚ್ಚಿದೆ.

ಫ್ರೆಶ್ ನ್ಯೂಸ್

Latest Posts

Featured Videos