ಕನ್ನಡ ರಾಜ್ಯೋತ್ಸಕ್ಕೆ ಶೋಭಾ ಕರಂದ್ಲಾಜೆ ಬೇಡಿಕೆ

ಕನ್ನಡ ರಾಜ್ಯೋತ್ಸಕ್ಕೆ ಶೋಭಾ ಕರಂದ್ಲಾಜೆ ಬೇಡಿಕೆ

ಉಡುಪಿ, ನ. 02: 64 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಕು. ಶೋಭಾ ಕರಂದ್ಲಾಜೆಯವರ ಬೇಡಿಕೆ.

  1. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ತಹಸೀಲ್ದಾರ್, ದಫೇದಾರ್ ಇನ್ನಿತರ ಎಲ್ಲ ಪರ್ಷಿಯನ್ ಭಾಷೆಯ ಪದಬಳಕೆಯ ಬದಲಾಗಿ ಕನ್ನಡ ಪದಗಳ ಬಳಕೆಯನ್ನು ಮಾಡಬೇಕು.
  2. ಬ್ರಿಟಿಷ್ ಹೆಸರುಗಳಿರುವ ಬೆಂಗಳೂರಿನ ರಸ್ತೆ ಹಾಗೂ ವೃತ್ತಗಳಿಗೆ ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದ, ಕನ್ನಡ ಭಾಷೆ, ನಾಡು-ನುಡಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ ಮಹಾನುಭಾವರ ಹೆಸರನ್ನು ಇಟ್ಟು ಗೌರವ ಸೂಚಿಸಬೇಕು.
  3. ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವಂತಾಗಬೇಕು, ರಾಜ್ಯದ ಎಲ್ಲ ಶಾಲೆಗಳಲ್ಲಿ, ಸಿ ಬಿ ಎಸ್ ಸಿ/ಐ ಸಿ ಎಸ್ ಸಿ ಶಾಲೆಗಳನ್ನು ಒಳಪಡಿಸಿ ಕಡ್ಡಾಯವಾಗಿ ಕನ್ನಡ ಒಂದು ಕಲಿಕೆಯ ವಿಷಯವಾಗ ಬೇಕು ಎಂದು ಮನವಿ ಮಾಡಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos