ಪತ್ನಿ ಪರವಾಗಿ ಹೊಸ ಗ್ಯಾರೆಂಟಿ ಘೋಷಿಸಿದ ಶಿವಣ್ಣ

ಪತ್ನಿ ಪರವಾಗಿ ಹೊಸ ಗ್ಯಾರೆಂಟಿ ಘೋಷಿಸಿದ ಶಿವಣ್ಣ

ಶಿವಮೊಗ್ಗ: ಶಿವಮೊಗ್ಗದಲ್ಲಿ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಮತಯಾಚನೆ ಭಾಷಣ ಮಾಡುವ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಹೆಣ್ಣು ಮಕ್ಕಳಿಗೆ ಅವಕಾಶ ಕೊಡಿ ,ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನು ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಇದಕ್ಕೆ ಸಭೆಯಲ್ಲಿ ನೆರೆದಿದ್ದ ಮತದಾರರು ಕೂಡ ಕೂಗೆಬ್ಬಿಸಿ ಸಂಭ್ರಮ ಪಟ್ಟಿದ್ದಾರೆ.

ಕೂಲಿ ಕೆಲಸದಿಂದ ಅತ್ಯುನ್ನತ ಸ್ಥಾನದ ವರೆಗೂ ಎಲ್ಲ ಮಹತ್ತರ ಜವಾಬ್ದಾರಿಗಳನ್ನು ಮಹಿಳೆಯರು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಹೀಗಾಗಿ ಮಹಿಳಾ ಅಭ್ಯರ್ಥಿ ಎಂದು ಮೀನಾಮೇಷ ಎಣಿಸದೆ ಗೀತ ಶಿವರಾಜ್ ಕುಮಾರ್ ಗೆ ಅವಕಾಶ ಮಾಡಿಕೊಡಿ. ಅವರ ಬಳಿ ಕೆಲಸ ಮಾಡಿಸುವುದು ನನ್ನ ಜವಾಬ್ದಾರಿ ,ಇದು ನನ್ನ ಗ್ಯಾರೆಂಟಿ ಅಂತ ಶಿವಣ್ಣ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos