ಶಾಸನಗಳ ಪತ್ತೆ ಮಾಡಿ ವಾಸ್ತವ ಸ್ಥಿತಿಯನ್ನು ತಿಳಿಯಬೇಕು

ಶಾಸನಗಳ ಪತ್ತೆ ಮಾಡಿ ವಾಸ್ತವ ಸ್ಥಿತಿಯನ್ನು ತಿಳಿಯಬೇಕು

ದೇವನಹಳ್ಳಿ, ಜು. 13 : ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ದೊರೆತಿರುವ ಅಪ್ರಕಟಿತ ಶಾಸನದ ಪಠವನ್ನು ಪುರತತ್ವ ಇಲಾಖೆ ಅವರು ಇತಿಹಾಸ ಸಂಶೋಧಕರು ಸಂಶೋಧನೆ ಮಾಡಿದ್ದಲ್ಲಿ ದೇವನಹಳ್ಳಿ ಇತಿಹಾಸಕ್ಕೆ ಸಂಬಂದಿಸಿದ ಹೊಸ ಸಂಗತಿಗಳು ಗೋಚರ ವಾಗಬಹುದು ಎಂದು  ಶಾಸನಗಳ ಪತ್ತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಮುಖ್ಯ ಶಿಕ್ಷಕ ಬಿಜಿ ಬಿಟ್ಟಸಂದ್ರ ಗುರು ಸಿದ್ದಯ್ಯ ಒತ್ತಾಯಿಸಿದರು.

ಇಂದು ತಾಲುಕಿನ ಬನ್ನಿಮಂಗಲ ಕೆರೆಯಲ್ಲಿ ತೂಬಿಗೆ ಅಳವಡಿಸಿರುವ ಕಲ್ಲಿನ ಮೇಲೆ ಕೆತ್ತಲಿರುವ ಶಾಸನದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಬನ್ನಿಮಂಗಲ ಕೆರೆಯಲ್ಲಿ ತೂಬಿಗೆ ಅಳವಡಿಸಿರುವ ಕಲ್ಲಿನ ಮೇಲೆ ಕೆತ್ತಲಾಗಿರುವ ಗಜಲಕ್ಷ್ಮಿನೂರಕ್ಕೂ ಹೆಚ್ಚಿನ ತಮಿಳು, ಕನ್ನಡ ಮತ್ತು ಸಂಸ್ಕೃತ ಅಕ್ಷರಗಳು ಇವೆ.

ತಾಲೂಕಿಗೆ ಸಂಬಂದಿಸಿದ ಶಾಸನಗಳನ್ನು ಡಾ. ಬಿ ಆರ್ ರೈಸ್ ಅವರು ಪ್ರಕಟಿಸಿರುವ 9ನೇ ಸಂಪುಟದಲ್ಲಿ ಅನೇಕ ಶಾಸನಗಳನ್ನು ಉಲ್ಲೇಖಿಸಲಾಗಿದೆ. ಕನ್ನಡ ಲಿಪಿ 80, ತಮಿಳು ಲಿಪಿ 15, ಸಂಸ್ಕೃತ ಲಿಪಿ 5 ಶಾಸನಗಳು ಇವೆ. ಕೆಲವು ಲಿಪಿಗಳ ಕೆತ್ತನೆಯ ಕಲ್ಲುಗಳು ತುಂಡಾಗಿದೆ. ಪ್ರಾಚ್ಯ ವಸ್ತು ಸಂಗ್ರಾಹಲಯ ಅಧಿಕಾರಿಗಳು ಹೊಸ ಸಂಶೋಧನೆ ಮತ್ತು ಅಧ್ಯಯನದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.

ಹಲವಾರು ಇತಿಹಾಸ ಪುಸ್ತಕಗಳಲ್ಲಿ ಹಲವಾರು ರಾಜ ಮನೆತನಗಳೇ ಸಂಶೋಧನೆಗಳನ್ನು ನೋಡುತ್ತಿದ್ದವೆ. ಇದೀಗ ನಮ್ಮ ನಾಡನ್ನು ಆಳಿದಂತಹ ರಾಜ ವಂಶಸ್ಥರು ಬಿಟ್ಟಿ ಹೋಗಿರುವ ಪುರಾವೆಗಳನ್ನು ಅವಲೋಕಿಸಿದರೆ ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲ ವಾಗುವುದುರ ಜೊತೆಗೆ ಇತಿಹಾಸ ತಿಳಿಯಲು ಸಹಕಾರಿ ಆಗುವುದು.  ಪುರತತ್ವ ಇಲಾಖೆ ಹೆಚ್ಚಿನ ಗಮನ ಹರಿಸಬೇಕು. ತಾಲೂಕಿನಲ್ಲಿ ಶಾಸನಗಳು ಮಾಸ್ತಿ ಗಲ್ಲು, ವೀರಗಲ್ಲು, ದೇವಾಲಯ, ಪಾಲು ಬಿದ್ದು ಐತಿಹಾಸಿಕ ಕಟ್ಟಡಗಳಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ  ಕುರುಹುಗಳು, ಶಿಲ್ಪಿಗಳ ಬಗ್ಗೆ ಹೊರ ಜಗತ್ತಿನ ಬೆಳಕಿಗೆ ಬಂದಿದೆ.

ಅರದೇಶನ ಹಳ್ಳಿ ಬಳಿ ಇರುವ ರಾಷ್ರಟ ಕೂಟ ಶಾಸನ, ಚೋಳ ಮತ್ತು ಚಾಲುಕ್ಯರ ಕಾಲದ ಬ್ಯಾಡರ ಹಳ್ಳಿ ಶಾಸನ, ಕಾರಹಳ್ಳಿ ಬಳಿ ತೂರುಗೋಳ್ ಶಾಸನ, ನಂದಿ ಬೆಟ್ಟ ಕ್ರಾಸ್ ಬಳಿ ಇರುವ ಕುರುವತ್ತಿ ಶಾಸನಕ್ಕಿಂತ ಬನ್ನಿಮಂಗಲ ಕೆರೆಯಲ್ಲಿ ತೂಬಿಗೆ ಅಳವಡಿಸಿರುವ ಕಲ್ಲಿನ ಮೇಲೆ ಕೆತ್ತಲಿರುವ ಶಾಸನ ಬಹಳ ವಿಶೇಷ ವಾಗಿದೆ ಎಂದು ಹೇಳಿದರು.

ಇತಿಹಾಸ ಸಂಶೋಧಕ ಫ್ರೋ. ಕೆ ಆರ್ ನರಸಿಂಹನ್ ಮಾತನಾಡಿ ತಾಲೂಕಿನಲ್ಲಿ ಆಳ್ವಿಕೆ ಮಾಡಿದಂತೆ ರಾಜರ ಇತಿಹಾಸವನ್ನು ಈ ಶಾಸನಗಳ ಮೂಲಕ ತಿಳಿಯಬಹುದು. ತಾಲೂಕಿನಲ್ಲಿ ಈ ಗಾಗಲೇ ಹಲವಾರು ಗ್ರಾಮಗಳಲ್ಲಿ ಹತ್ತಾರು ಶಾಸನಗಳು, ವೀರಗಲ್ಲು, ತೂರುಗೋಳ್ ಶಾಸನಗಳು ದೊರೆತಿದೆ. ಅವುಗಳು ಪುರತತ್ವ ಇಲಖೆಯಲ್ಲಿ ದಾಖಲಾಗಿರುವುದಿಲ್ಲ. ಅವುಗಳನ್ನು ಇಲಾಖೆ ಇತಿಹಾಸ ತಜ್ಞರ , ಸಂಶೋಧಕರ ಮೂಲಕ ಅಧ್ಯಯನ ಮಾಡಬೇಕು ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos