ತ್ಯಾಗ ಬಲಿದಾನಗಳ ಹೋರಾಟವೇ ಸ್ವಾತಂತ್ರ್ಯ ದಿನಾಚರಣೆ; ಶರತ್ ಬಚ್ಚೇಗೌಡ

ತ್ಯಾಗ ಬಲಿದಾನಗಳ ಹೋರಾಟವೇ ಸ್ವಾತಂತ್ರ್ಯ ದಿನಾಚರಣೆ; ಶರತ್ ಬಚ್ಚೇಗೌಡ

ಸೂಲಿಬೆಲೆ, ಆ. 15: ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಮರಳಿ ಪಡೆದ ದಿನದ ಅಂಗವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಸ್ವಾತಂತ್ರ್ಯಕ್ಕಾಗ ತ್ಯಾಗ ಬಲಿದಾನಗಳ ಹೋರಾಟ ಮಾಡಿದ ಮಹಾಪುರಷರ ಸ್ಮರಣೆಯಾಗಬೇಕು ಎಂದು ಬಿಜೆಪಿ ಯುವ ಮೊರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಸಮೀಪದ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿನೆಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದರು.

ಭಾರತೀಯರು ಆಶಾಭಾವನಾ ಜೀವಿಗಳು ಅತಿಥಿ ದೇವೋಭವ ಎನ್ನುವ ಮನಸಿನವರು ಇದನ್ನೇ ದುರುಪಯೋಗ ಮಾಡಿಕೊಂಡ ಬ್ರಿಟಿಷರು ನಮ್ಮ ಸ್ವಾತಂತ್ರ್ಯವನ್ನೇ ಕಸಿದುಕೊಂಡು ಸುಮಾರು 200 ವರ್ಷಗಳ ಕಾಲ ಆಳ್ವಿಕೆ ನೆಡೆಸಿದರು ಆದರೂ ಛಲ ಬಿಡದೆ ದೇಶವಾಸಿಗಳು, ಹೋರಾಟ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡರು ಮತ್ತೇ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.

ಎಂದಿಗೂ ಭಾರತ ಸೋತಿಲ್ಲ ಸೋಲುವುದು ಇಲ್ಲಾ ವಿಶ್ವದಲ್ಲಿಯೇ ಹೆಚ್ಚು ಮಾನವ ಸಂಪನ್ಮೂಲ ಇರುವ ದೇಶ ಎಂಬ ಹೆಗ್ಗಳಿಕೆ ಇದೇ ಇತ್ತೀಚೇಗೆ ಇಡೀ ವಿಶ್ವವೇ ಭಾರತದ ಅಭಿವೃದ್ದಿಯನ್ನು ಕಂಡು ಬೇರಗಾಗುತ್ತಿವೆ. ಅಭಿವೃದ್ದಿ ವಿಚಾರದಲ್ಲಿ ಶರವೇಗದಲ್ಲಿ ಸಾಗುತ್ತಿದ್ದೆವೆ ದೇಶದ ಬಗ್ಗೆ ಎಲ್ಲರೂ ಹೆಮ್ಮೆ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹುಟ್ಟಿದ ಊರಿನಲ್ಲಿ ಪ್ರಥಮ ಬಾರಿಗೆ ದ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜ ವಂದನೆ ಸ್ವೀಕರಿಸಿದ ನೆನಪು ಎಂದಿಗೂ ಮಾಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಗಿಡ ನೆಡೆವ ಮೂಲಕ ಪ್ರಕೃತಿಯನ್ನು ಕಾಪಾಡುವ ಹೋಣೆಗಾರಿಕೆ ನಿಮ್ಮದಾಗಬೇಕು. ಶರತ್ ಬಚ್ಚೇಗೌಢ, ಬಿಜೆಪಿ ಯುವ ಮೊರ್ಚಾ ರಾಜ್ಯ ಕಾರ್ಯದರ್ಶಿ.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಹಕಾರ ರತ್ನ ಬಿ.ವಿ.ಸತೀಶಗೌಡ, ತಾ.ಪಂ.ವಿರೋಧ ಪಕ್ಷದ ನಾಯಕ ಡಿ.ಟಿ.ವೆಂಕಟೇಶ್, ತಾ.ಪಂ.ಸದಸ್ಯೆ ಶಕುಂತಲಾನಾಗರಾಜ್, ಗ್ರಾ.ಪಂ.ಅಧ್ಯಕ್ಷೆ ಶೋಭಾಚನ್ನಕೃಷ್ಣ, ಪಂಚಾಯತ ಅಭಿವೃದ್ದಿ ಅಧಿಕಾರಿ ರಶ್ಮಿ, ಗುತ್ತಿಗೆದಾರ ದೇವರಾಜ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಭುವನೇಶ್ವರಿ, ಪ್ರಾಥಮಿಕ ಶಾಲೆಯ ಸತ್ಯನಾರಾಯಣ್, ಸಹ ಶಿಕ್ಷಕರಾದ ಹರೀಶ್, ನರಸಿಂಹಸ್ವಾಮಿ, ವೆಂಕಟೇಶ್, ಮಂಜುನಾಥ್, ಕರಗಪ್ಪ, ಉಷಾರಾಣಿ, ಬೆಂಡಿಗಾನಹಳ್ಳಿ ವಿಜಯಕುಮಾರ್, ಮಂಜುನಾಥ್ ಇತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos