ಶಮ್ಸಿ ಮ್ಯಾಜಿಕ್..!

ಪಾರ್ಲ್, ಡಿ. 5 : ಕ್ರಿಕೆಟ್ ಅಂಗಳದಲ್ಲಿ ವಿಚಿತ್ರ ಸಂಭ್ರಮಾಚರಣೆ ಸಾಮಾನ್ಯ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಝಾಂಸಿ ಸೂಪರ್ ಲೀಗ್ (ಎಂಎಸ್ಎಲ್) ಟಿ20 ಪಂದ್ಯದಲ್ಲಿ ಪಾರ್ಲ್ ರಾಕ್ಸ್ ತಂಡದ ಲೆಗ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಮ್ಯಾಜಿಕ್ ಮಾಡಿದ್ದಾರೆ.
ಪಾರ್ಲ್ ರಾಕ್ಸ್ ಮತ್ತು ಡರ್ಬನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಡರ್ಬನ್ ಹೀಟ್ ತಂಡದ ವಿಹಾನ್ ಲಬ್ಬೆ ಶಮ್ಸಿ ಎಸೆತವನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚ್ ನೀಡಿ ಔಟಾದರು.
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮ್ಸಿ ಕೆಂಪು ಬಣ್ಣದ ಕರವಸ್ತ್ರವನ್ನು ತೆಗೆದು ಅದರಲ್ಲಿ ಬಿಳಿ ಬಣ್ಣದ ದಂಡವನ್ನು ಹೊರ ತೆಗೆಯುವ ಮೂಲಕ ಜಾದು ಮಾಡಿ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಮ್ಸಿ 4 ಓವರ್ ಎಸೆದು 37 ರನ್ ನೀಡಿ 2 ವಿಕೆಟ್ ಪಡೆದಿದ್ದರೂ ತಂಡ ಸೋತಿದೆ.

ಫ್ರೆಶ್ ನ್ಯೂಸ್

Latest Posts

Featured Videos