ಸಂಭೋಗ ನಿಲ್ಲಿಸಿದ್ರೆ ಕಾಡಲಿದೆ ಈ ರೋಗ

ಸಂಭೋಗ ನಿಲ್ಲಿಸಿದ್ರೆ ಕಾಡಲಿದೆ ಈ ರೋಗ

ನ್ಯೂಸ್ ಎಕ್ಸ್ ಪ್ರೆಸ್, ಮಾ.12:  ಪ್ರತಿಯೊಬ್ಬ ವ್ಯಕ್ತಿಯೂ ಒಂದು ವಯಸ್ಸಿನ ನಂತ್ರ ಲೈಂಗಿಕತೆಯಲ್ಲಿ ಆಸಕ್ತಿ ಹೊಂದುತ್ತಾನೆ. ಸಂಗಾತಿ ಜೊತೆ ಸಂಭೋಗ ಮನಸ್ಸಿನ ಜೊತೆ ಆರೋಗ್ಯಕ್ಕೂ ಒಳ್ಳೆಯದು. ಸೆಕ್ಸ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತು.

ಆದ್ರೆ ಕೆಲಸದ ಒತ್ತಡ, ಕುಟುಂಬ, ಮಕ್ಕಳ ಕಾರಣಕ್ಕೆ ಅನೇಕರು ನಿಧಾನವಾಗಿ ಸೆಕ್ಸ್ ನಿಂದ ದೂರವಾಗ್ತಾರೆ. ವಯಸ್ಸು 35 ರ ಗಡಿ ದಾಟುತ್ತಿದ್ದಂತೆ ಹೆಚ್ಚಿನ ಪ್ರಮಾಣದ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ತಾರೆ.

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೋದ್ರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.

ಸಂಶೋಧನೆ ಪ್ರಕಾರ, ಸೆಕ್ಸ್ ಕಡಿಮೆಯಾಗ್ತಿದ್ದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ನಿಯಮಿತವಾಗಿ ಸಂಭೋಗ ನಡೆಸುವವರಿಗಿಂತ ಸಂಭೋಗ ನಡೆಸದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆಯಂತೆ.

ಜೀವನದಲ್ಲಿ ಶಾರೀರಿಕ ಸಂಬಂಧ ಕಡಿಮೆಯಿದ್ರೆ ಒತ್ತಡ ಹೆಚ್ಚಾಗುತ್ತದೆ. ಸೆಕ್ಸ್ ನಿಂದ ದೂರವಿರುವವರು ಸಣ್ಣ ಸಣ್ಣ ಮಾತಿಗೂ ಒತ್ತಡಕ್ಕೆ ಒಳಗಾಗ್ತಾರಂತೆ. ಖಿನ್ನತೆ ಅವ್ರನ್ನು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಸೆಕ್ಸ್ ಇಲ್ಲದ ಜೀವನದಲ್ಲಿ ಉತ್ಸಾಹ ಕೂಡ ಕಡಿಮೆ ಎನ್ನುತ್ತಾರೆ ಸಂಶೋಧಕರು. ಸಾಮಾನ್ಯವಾಗಿ ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸುವವರು ದಿನವಿಡಿ ಉತ್ಸಾಹದಿಂದಿರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos