ಹುಬ್ಬಳ್ಳಿ : ಹರಿದು ಬರುತ್ತಿದೆ ಚರಂಡಿ ನೀರು!

ಹುಬ್ಬಳ್ಳಿ : ಹರಿದು ಬರುತ್ತಿದೆ ಚರಂಡಿ ನೀರು!

ಹುಬ್ಬಳ್ಳಿ ನಗರದಲ್ಲಿರೋ ಏಕೈಕ ಪ್ರೇಕ್ಷಣೀಯ ಸ್ಥಳ ಉಣಕಲ್ ಕೆರೆ. ಹು-ಧಾ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ಕೆರೆಯ ನೀರನ್ನು ಟೆಸ್ಟ್ ಮಾಡಿಸಿದ್ದು ನೀರು ಯೋಗ್ಯವಲ್ಲ ಅನ್ನೋ ವರದಿ ಬಂದಿದೆ. ಆದರೂ ಇದೇ ನೀರಲ್ಲಿ‌ಕೆಲವರು ತರಕಾರಿ ಬೆಳೆಯುತ್ತಿದ್ದಾರೆ. ಅದನ್ನು ಯಾರೂ ಸೇವಿಸಬೇಡಿ, ಯಾರೂ ಉಣಕಲ್ ಕೆರೆಯ ನೀರನ್ನು ಮುಟ್ಟಬೇಡಿ ಎಂದು ಮನವಿ ಮಾಡಿದ್ದಾರೆ.

ಅದು ಐತಿಹಾಸಿಕ ಕೆರೆ.. ಅಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಬರ್ತಾರೆ.. ಹೊರ ಜಿಲ್ಲೆಯಿಂದಲೂ‌ ಅಲ್ಲಿಗೆ ಪ್ರವಾಸಿಗರು ಬರ್ತಾರೆ. ಐತಿಹಾಸಿಕ ಕೆರೆಯ ಸುತ್ತಮುತ್ತ ವಾಯುವಿಹಾರಕ್ಕೂ ಜನ‌ ಬರ್ತಾರೆ.. ಆದ್ರೆ ಆ ಕೆರೆಯ ನೀರು ಇದೀಗ ಹಸಿರು ಬಣ್ಣಕ್ಕೆ ತಿರುಗಿದೆ. ಕೆರೆಯ ನೀರು ಸಂಪೂರ್ಣ ಹಸಿರಾಗಿದ್ದು ದುರ್ವಾಸನೆ ಬರ್ತಿದೆ.. ಐತಿಹಾಸಿಕ ಕೆರೆಯ ನೀರು ಸಂಪೂರ್ಣ ಮಲಿನವಾಗಿದೆ. ಇದಕ್ಕೆಲ್ಲ ಕಾರಣ ಚರಂಡಿ ನೀರು..

ಒಂದು ಕಡೆ ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದ ಕೆರೆ ನೀರು.. ಇನ್ನೊಂದು ಕಡೆ ಮಲಿನವಾದ ಕೆರೆ.. ಮತ್ತೊಂದು ಕಡೆ ಕೆರೆಗೆ ಹರಿದು ಬರ್ತಿರೋ ಚರಂಡಿ ನೀರು.. ಹೌದು ಇವೆಲ್ಲ ದೃಶ್ಯಗಳು‌ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ ಕೆರೆ ನೀರು ಇದೀಗ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ.  ಹುಬ್ಬಳ್ಳಿಯ ಕೂಗಳತೆ ದೂರದಲ್ಲಿರೋ ಉಣಕಲ್ ಕೆರೆಗೆ ಅದರದೇ ಆತ ಇತಿಹಾಸವಿದೆ.

 

ಫ್ರೆಶ್ ನ್ಯೂಸ್

Latest Posts

Featured Videos