ದಲಿತ ಸಂಘರ್ಷ ಸಮಿತಿ ವತಿಯಿಂದ ಸ್ವಾಭಿಮಾನ ಸಂಕಲ್ಪ ದಿನ

 ದಲಿತ ಸಂಘರ್ಷ ಸಮಿತಿ ವತಿಯಿಂದ ಸ್ವಾಭಿಮಾನ ಸಂಕಲ್ಪ ದಿನ

ಬೆಂಗಳೂರು, ಡಿ. 2: ದಲಿತ ಸಂಘರ್ಷ ಸಮಿತಿ ವತಿಯಿಂದ ಡಿ.6.ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 63ನೇ ಮಹಾ ಪರಿ ನಿರ್ವಾಣದ ಅಂಗವಾಗಿ  ಪ್ರಭುತ್ವ ಭಾರತ ನಿರ್ಮಾಣಕ್ಕಾಗಿ ಸ್ವಾಭಿಮಾನ ಸಂಕಲ್ಪ ದಿನ ಆಚರಿಸಲು ಬನ್ನಪ್ಪ ಪಾರ್ಕ್ ನಿಂದ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆವರೆಗೂ ಬೃಹತ್ ಕಾಲ್ನಡಿಗೆ ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್. ಮಾರಪ್ಪ, ಡಾ. ಬಿ.ಆರ್. ಅಬೇಡ್ಕರ್ ಅವರ 63ನೇ ಮಹಾ ಪರಿನಿರ್ವಾಣ ದಿನವನ್ನು ಸ್ವಾಭಿಮಾನ ಸಂಕಲ್ಪ ದಿನವಾಗಿ ಆಚರಿಸಲು ಅಂಬೇಡ್ಕರ್ ಅನುಯಾಯಿಗಳು ಕೂಡಿ ಒಂದೊಂದು ಗುಲಾಬಿ ಹೂವಿನೊಂದಿಗೆ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲು ಈ ಜಾಥ ಏರ್ಪಡಿಸಿದ್ದೇವೆ ಎಂದು ತಿಳಿಸಿದರು.

ಹಕ್ಕೊತ್ತಾಯಗಳು: ಎಲ್ಲ ಸರಕಾರಿ ಶಾಲೆಗಳಿಗೆ ಡಾ.ಬಿ.ಆರ್ ಅವರು ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಸುಳ್ಳು ವಿಷಯ ಹೊತ್ತ ಮಾರ್ಗದರ್ಶಿ ಕೈಪಿಡಿಯೊಂದಿಗೆ ಸುತ್ತೋಲೆ ಹೊರಡಿಸಲು ಕಾರಣರಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಆಯುಕ್ತ ಜಗದೀಶ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆ ನಂತರ ಅಂಬೇಡ್ಕರ್ ಅವರ ಪ್ರಿಯಾಂಬಲ್ ಓದಿಸಬೇಕು ಹಾಗೂ ರಾಜ್ಯ ಎಲ್ಲ ಸರಕಾರಿ  ನ್ಯಾಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರ ಆಳವಡಿಸಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos