ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

ದೇವನಹಳ್ಳಿ, ಸೆ. 5: ವಿದ್ಯಾರ್ಥಿಗಳು ನಿತ್ಯ ಕ್ರೀಡೆ, ವ್ಯಾಯಾಮ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸದೃಢ ದೇಹ, ಕ್ರಿಯಾಶೀಲತೆ, ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಎಸ್.ಎಲ್.ಎಸ್. ಸ್ಕೂಲ್ ಮಾಡರ್ನ್ ವಿಸ್ಡಮ್ ಸಂಸ್ಥಾಪಕ ಕಾರ್ಯದರ್ಶಿ ಡಿ.ಎಸ್. ಧನಂಜಯ್ ತಿಳಿಸಿದರು.

ನಗರದ ಹೊಸಕುರುಬರ ಕುಂಟೆ ರಸ್ತೆಯಲ್ಲಿರುವ ಎಸ್‌ಎಲ್‌ಎಸ್ ಶಾಲೆಯ ಆವರಣದಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ವಿಜೇತ ಹಾಗೂ ಯೋಗ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದರು.

ದೊಡ್ಡಬಳ್ಳಾಪುರದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಪ್ರವಲ್ ಡಿಜೈ, ಗಗನ್ ಬಿ.ಹೆಚ್, ಹಾಗೂ ಚರಣ್, ಮಹೇಶ್, ಜಯಗಳಿಸಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾರೆ. ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಶಾಲೆಯ 11 ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆರ್ಹತೆ ಪಡೆದಿರುತ್ತಾರೆ. ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಮಕ್ಕಳು ಗೆದ್ದಿದ್ದು, ವಿಭಾಗೀಯ ಮಟ್ಟಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿರುತ್ತಾರೆ ಎಂದರು.

ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು

ಹೆಣ್ಣು ಮಕ್ಕಳ ವಿಭಾಗದಲ್ಲಿ ಹರಿಣಿ ಪ್ರಥಮ ಸ್ಥಾನ, ಸ್ವಾತಿ, ಸ್ಪೂರ್ತಿ ಬಿ ಎನ್ ಹಾಗೂ ಮೋನಿಷಾ ದ್ವೀತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗಂಡು ಮಕ್ಕಳ ವಿಭಾಗದಲ್ಲಿ ಮನೋಜ್ ಡಿ.ಕೆ, ಬಾಲಾಜಿ, ಯಶಸ್‌ಗೌಡ ಹಾಗೂ ಅಜಯ್ ಕುಮಾರ್ ಪ್ರಥಮ ಸ್ಥಾನ ಪಡೆದಿರುತ್ತಾರೆ.  ವರುಣ್ ಗೌಡ, ವೆಂಕಟ್‌ಯಾದವ್ ಹಾಗೂ ಅಜಿತ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಯೋಗ ಸ್ಪರ್ಧೆಯಲ್ಲಿ ವಿಜೇತರಾದ  ಮಕ್ಕಳು

ವಿಶ್ವಾಸ್ ಗೌಡ, ಪವನ್ ಗೌಡ ಹಾಗೂ ಸಾತ್ವಿಕ್ ಕೆ ಆರ್ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಪ್ರಾರ್ಥನ ಮುಕ್ತ, ಮಾಜಿ ಸಬೀಲ್, ಚಂದುಶ್ರೀ ಅರ್, ತ್ರಿಷಾ ಹಾಗೂ ನಿತಿನ್ ಗೌಡ ಸಿ.ಎಂ, ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿಜಯ್ ದುರ್ಗಾ ಪ್ರಸಾದ್ ಐದನೇ ಸ್ಥಾನ ಪಡೆದಿರುತ್ತಾರೆ.

ವಿಜೇತರಾದ ಎಲ್ಲಾ ಮಕ್ಕಳನ್ನು ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಧನಂಜಯ್ ಅಬಿನಂದಿಸಿದರು. ಚದುರಂಗದ ತರಬೇತುದಾರರಾದ ರವಿಕಿರಣ್, ಕುಸ್ತಿ ತರಬೇತುದಾರರಾದ ಮೋಹನ್ ಕುಮಾರ್ ಹಾಗೂ ಯೋಗ ತರಬೇತುದಾರರಾದ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.

 

ಫ್ರೆಶ್ ನ್ಯೂಸ್

Latest Posts

Featured Videos