ಇಲ್ಲಿ ವನ್ಯಜೀವಿಗಳ ಸೌಂದರ್ಯ ನೋಡಿ

ಇಲ್ಲಿ ವನ್ಯಜೀವಿಗಳ ಸೌಂದರ್ಯ ನೋಡಿ

ನಾಗರಹೊಳೆ, ಡಿ. 25:    ಅಥವಾ ನಾಗರ ಹೊಳೆ ಉದ್ಯಾನವನ ದಕ್ಷಿಣ ಭಾರತದ ಅತ್ಯುತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿನ ವನ್ಯಜೀವಿಗಳಿಗೆ ಉತ್ತಮವಾದ ಸ್ಥಳ ಇದಾಗಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಸಹ ಕರೆಯುತ್ತಾರೆ. ಈ ಅಭಯಾರಣ್ಯವು ಮೈಸೂರು ಹಾಗೂ ಕೊಡಗು ಜಿಲ್ಲೆಗಳಾದ್ಯಂತ ವ್ಯಾಪಿಸಿದೆ.

ಮೂಲತಃ ಈ ಅರಣ್ಯ ಪ್ರದೇಶವು ಮೈಸೂರು ಮಹಾರಾಜರ ಖಾಸಗಿ ಬೇಟೆಯಾಡುವ ಸ್ಥಳವಾಗಿತ್ತು. ನಾಗರಹೊಳೆ ಅರಣ್ಯ ಪ್ರದೇಶವು 1955 ರಲ್ಲಿ 258 ಚ.ಕಿ.ಮೀ ಪ್ರದೇಶವನ್ನು ಒಳಗೊಂಡಿತ್ತು. ಆದರೆ ಈಗ 643 ಚ.ಕಿ.ಮೀ ಪ್ರದೇಶವನ್ನು ವಿಸ್ತರಿಸಿದೆ. ಇಲ್ಲಿ ಹಲವಾರು ವನ್ಯಜೀವಿಗಳನ್ನು ನೀವು ಕಾಣಬಹುದಾಗಿದೆ. ವನ್ಯಜೀವಿಗಳೇ ಅಲ್ಲದೇ ದಟ್ಟವಾದ ಕಾಡು, ಹೊಳೆಗಳು, ಕಣಿವೆಗಳು ಮತ್ತು ಜಲಪಾತವನ್ನು ನೀವು ಇಲ್ಲಿ ಆನಂದಿಸಬಹುದಾಗಿದೆ.

ವೇನಾಡು ವೈಲ್ಡ್ ಲೈಫ್ ಈ ಅಭಯಾರಣ್ಯವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಕೇವಲ 12 ಕಿ,ಮೀ ದೂರದಲ್ಲಿದೆ. ಇದೊಂದು ಆನೆಯ ರಿಸರ್ವ್. ಇದು ಕೇರಳದ ವನ್ಯಜೀವಿಗಳ ಪ್ರಮುಖವಾದ ಸ್ಥಳಗಳಲ್ಲಿ ಒಂದಾಗಿದೆ. ಜೀಪ್ ಸಫಾರಿಯ ಭಾಗವಾಗಿ ಮಾತ್ರ ಇಲ್ಲಿ ಪ್ರವೇಶ ನೀಡಲಾಗುತ್ತದೆ. ಇಲ್ಲಿನ ಪ್ರವಾಸಿಗರಿಗೆ ತಮ್ಮದೇವಾಹನಗಳನ್ನು 20 ನಿಮಿಷಗಳ ಕಾಲ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡುತ್ತಾರೆ.

ವೇನಾಡು ವೈಲ್ಡ್ ಲೈಫ್ ಈ ಅಭಯಾರಣ್ಯವನ್ನು 2 ಪ್ರತ್ಯೇಕವಾದ ಭಾಗಗಳಾಗಿ ವಿಭಾಗಿಸಲಾಗಿದೆ. ಇಲ್ಲಿ ಸರಿಸುಮಾರು 900 ಆನೆಗಳು ಇವೆ. ವನ್ಯಜೀವಿಗಳಾದ ಕಾಡು ನಾಯಿ, ಹುಲಿ, ಚಿರತೆ, ಕೋತಿಗಳು, ಕರಡಿಗಳು, ಹಾವುಗಳು, ಹಲವಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಪ್ರವೇಶ ನೀಡಲಾಗುತ್ತದೆ.

ವೇನಾಡು ವೈಲ್ಡ್ ಲೈಫ್ ಈ ಅಭಯಾರಣ್ಯಕ್ಕೆ ತೆರಳಲು ಮಾರ್ಚ್ ತಿಂಗಳಲ್ಲಿ ಭೇಟಿ ನೀಡುವುದು ಉತ್ತಮವಾದ ಸಮಯವಾಗಿದೆ. ಮಳೆಗಾಲದ ಸಮಯದಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಈ ಅಭಯಾರಣ್ಯವನ್ನು ಮುಚ್ಚಲಾಗಿರುತ್ತದೆ.

ಇರುಪ್ಪು ಜಲಪಾತ ಈ ಇರುಪ್ಪು ಜಲಪಾತವು ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇದು ಕೇರಳದ ವಯನಾಡ್ ಜಿಲ್ಲೆಯ ಗಡಿಭಾಗದಲ್ಲಿದೆ. ಕರ್ನಾಟಕ ರಾಜ್ಯದಲ್ಲಿನ ಕೊಡಗು ಜಿಲ್ಲೆಯ ಶ್ರೀಮಂಗಲ ಮತ್ತು ಕುಟ್ಟದ ನಡುವೆ ಇರುವ ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ಇರುಪ್ಪಿ ಜಲಪಾತವಿದೆ.

ಇರುಪ್ಪು ಜಲಪಾತ ಇದು ಕರ್ನಾಟಕದ ಅತ್ಯುತ್ತಮವಾದ ಹಾಗು ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತದ ಸೌಂದರ್ಯವನ್ನು ಕಾಣಲು ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಇರುಪ್ಪು ಜಲಪಾತ ಅದೆನೆಂದರೆ ಸಹೋದರರಾದ ರಾಮ ಹಾಗೂ ಲಕ್ಷ್ಮಣರು ಸೀತಾದೇವಿಯನ್ನು ಹುಡುಕಿಕೊಂಡು ಬ್ರಹ್ಮಗಿರಿಗೆ ಸಾಗುತ್ತಿದ್ದರು. ಆ ಸಮಯದಲ್ಲಿ ದಣಿವಾಗಿದ್ದ ರಾಮನು ತನ್ನ ಸಹೋದರನಿಗೆ ನೀರನ್ನು ತೆಗೆದುಕೊಂಡು ಬರಲು ತಿಳಿಸಿದನು. ಆ ಕ್ಷಣವೇ ಲಕ್ಷ್ಮಣ ತನ್ನ ಬಾಣಗಳಿಂದ ಬೆಟ್ಟಗಳ ಮಧ್ಯೆ ಹೊಡೆದು ಲಕ್ಷ್ಮಣ ತೀರ್ಥವನ್ನು ರಾಮನಿಗೆ ತಂದು ಕೊಟ್ಟನಂತೆ. 170 ಅಡಿ ಎತ್ತರದಿಂದ ಬೀಳುವ ಈ ಜಲಪಾತವು ಪಶ್ಚಿಮ ಘಟ್ಟದ ದಟ್ಟವಾದ ಕಾಡಿನ ನಡುವೆ ನೆಲೆಗೊಂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos