ಸ್ವೀಟಿ ಲುಕ್ ನೋಡಿ

ಸ್ವೀಟಿ ಲುಕ್ ನೋಡಿ

ಬೆಂಗಳೂರು, ಸೆ. 20: ಕನ್ನಡ ಚಿತ್ರರಂಗದಲ್ಲಿ ನಿನಗಾಗಿ ಸುಂದರಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ಗೊತ್ತಿರುವ ವಿಷಯ. ಅದರಲ್ಲೂ ‘ದಮಯಂತಿ’ ಚಿತ್ರದಲ್ಲಿ ರೌದ್ರಾವತಾರ ತಾಳಿ ಟೀಸರ್ ಮೂಲಕವೇ ಮೋಡಿ ಮಾಡಿದ್ದಾರೆ.

ಸದ್ಯ ‘ದಮಯಂತಿ’ ಮತ್ತು ‘ಭೈರಾದೇವಿ’ಯನ್ನು ನೆಚ್ಚಿಕೊಂಡಿರುವ ಸ್ವೀಟಿ ನಟಿ, ಎರಡು ಚಿತ್ರಗಳ ಮೇಲೆ ಅಪಾರ ವಿಶ್ವಾಸವಿರಿಸಿಕೊಂಡಿದ್ದಾರೆ. ಅದರಲ್ಲೂ ‘ದಮಯಂತಿ’ ಚಿತ್ರ ಪಂಚಭಾಷೆಯಲ್ಲಿ ತೆರೆಕಾಣಲಿದ್ದು, ಈ ಮೂಲಕ ಇಡೀ ಭಾರತೀಯ ಚಿತ್ರರಂಗ ಗಮನ ಸೆಳೆಯಲು ರಾಧಿಕಾ ಹೊರಟಿದ್ದಾರೆ.

‘ದಮಯಂತಿ’ ಚಿತ್ರದ ಟೀಸರ್ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ರಾಧಿಕಾ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ರಾಧಿಕಾ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos