ಸಂತ್ರಸ್ತರನ್ನು ಕಾಪಾಡಿ

 ಸಂತ್ರಸ್ತರನ್ನು ಕಾಪಾಡಿ

ಬೆಳಗಾವಿ, ಆ. 10: ವಿಪರೀತ ಮಳೆ ಹಿನ್ನಲೆ ಪ್ರವಾಹಕ್ಕೆ ಸಿಲುಕಿರುವ ರೋಧನ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತನ್ನಿ ಎಂದು ಇಲ್ಲಿನ ಸಂತ್ರಸ್ತರು ತಿಳಿಸಿದ್ದಾರೆ. 200ಕ್ಕೂ ಹೆಚ್ಚು ನಮಗೆ ಸಹಾಯ ನೀಡಿ ಎಂದು ತಿಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಪಡಾರದಡ್ಡಿಯಲ್ಲಿ 200 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ನಮ್ಮನ್ನು ಕಾಪಾಡಿ ಎಂದು ರಕ್ಷಣೆ ಕೇಳುತ್ತಿದ್ದಾರೆ. ನಮ್ಮ ನೆರವಿಗೆ ಧಾವಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
10 ಜನರು ಜ್ವರದಿಂದ ಬಳಲುತ್ತಿದ್ದು, 20 ಜನರು ಅಸ್ವಸ್ಥರಾಗಿದ್ದಾರೆ. ನಾವು ನೆರವಿಗಾಗಿ ಕಾಯುತ್ತಿದ್ದೆವೆ ಎಂದಿದ್ದಾರೆ.ಜಿಲ್ಲಾಡಳಿತ ಮೂರು ದಿನದಿಂದ ರಕ್ಷಣೆಗೆ ಬರುತ್ತೇವೆ. ಯಾವುದೇ ಅಧಿಕಾರಿಗಳಾಗಲಿ, ಹೆಲಿಕಾಪ್ಟರ್ ಆಗಲಿ ನಮ್ಮ ರಕ್ಷಣೆ ಬಂದಿಲ್ಲ. ರಕ್ಷಣೆಗೆ ಬರುತ್ತೇವೆ ಎಂದು ಜಿಲ್ಲಾಡಳಿತ ಕೇವಲ ಭರವಸೆಯನ್ನಷ್ಟೇ ಕೊಟ್ಟಿದೆ. ನಾವು ಎಲ್ಲ ರಸ್ತೆ ಸಂಪರ್ಕಗಳನ್ನು ಕಳೆದುಕ್ಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ನೆರವಿಗೆ ಇಂದು ಹೆಲಿಕಾಪ್ಟರ್ ಬರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos