‘ರಾಕಿಂಗ್ ಸ್ಟಾರ್’ ಯಶ್ ಚಿತ್ರದಲ್ಲಿ ಸಂಜಯ್ ದತ್.?

‘ರಾಕಿಂಗ್ ಸ್ಟಾರ್’ ಯಶ್ ಚಿತ್ರದಲ್ಲಿ ಸಂಜಯ್ ದತ್.?

ದೇಶಾದ್ಯಂತ ಸದ್ದು ಮಾಡಿದ ಕನ್ನಡಿಗರ ಬಹುಭಾಷಾ ಚಲನಚಿತ್ರ “ಕೆಜಿಎಫ್” ಮುಂದಿನ ಭಾಗ ಮೂಡಿ ಬರಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ವಿಶೇಷವೆಂದರೆ ಅದರ ಎರಡನೇ ಭಾಗದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಇರಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿರುವುದು ಕೆಜಿಎಫ್ ಎರಡನೇ ಭಾಗ ಈಗಲೇ ಸದ್ದು ಮಾಡುವಂತೆ ಮಾಡಿದೆ.

ಹೌದು…ಕೆಜಿಎಫ್ ಸರಣಿಯ ಮುಂದಿನ ಚಿತ್ರದಲ್ಲಿ ಸಂಜಯ್ ದತ್ ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಹಾಕಿಕೊಳ್ಳಲು ನಿರ್ಮಾಪಕರು ಒಲವು ತೋರಿದ್ದು, ಈಗಾಗಲೇ ಆ ಬಗ್ಗೆ ಮಾತುಕತೆ ನಡೆಯತ್ತಿದೆ ಎನ್ನಲಾಗಿದೆ.

ಆದರೆ ಅವರಿಗೆ ಯಾವ ಪಾತ್ರ ಹಾಗೂ ಆ ಚಿತ್ರದಲ್ಲಿ ಇನ್ನೂ ಯಾರ್ಯಾರು ಇರಲಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಇದೇ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿರುವ ‘ಕೆಜಿಎಫ್-2’ ಈಗಲೇ ಕುತೂಹಲ ಕೆರಳಿಸಲು ಶುರು ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos