ಸ್ಯಾಂಡಲ್’ವುಡ್ ನಲ್ಲಿ 2020ಕ್ಕೆ ಬರಲಿದೆ 300 ಕೋಟಿಯ ಚಿತ್ರ

ಸ್ಯಾಂಡಲ್’ವುಡ್ ನಲ್ಲಿ 2020ಕ್ಕೆ ಬರಲಿದೆ 300 ಕೋಟಿಯ ಚಿತ್ರ

ಬೆಂಗಳೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಸಿನಿಮಾ ದೊಡ್ಡ ದಾಖಲೆಯನ್ನೆ ಮಾಡಿದೆ. ಹೈಬಜೆಟ್ ಚಿತ್ರ ಇದಾಗಿದ್ದು, ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತ್ತು. ಸ್ಯಾಂಡಲ್ ವುಡ್ ಮತ್ತೊಂದು  ಬಿಗ್ ಬಜೆಟ್ ಚಿತ್ರವನ್ನು ತೆರೆಗೆ ತರಲು ರೆಡಿಯಾಗಿದೆ. ಕನ್ನಡದಲ್ಲೇ ತೆರೆಕಾಣಲು ಸಜ್ಜಾಗಿರೋ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳು ನಟಿಸಲಿದ್ದಾರೆ.

ಈ ಚಿತ್ರವು ನೈಜ ಘಟನೆಯ ಆಧಾರಿತ ಚಿತ್ರವಾಗಿದೆ. ಈ ಸಿನಿಮಾದ ಬಂಡವಾಳ ಎಷ್ಟು ಅಂದರೆ ಬರೋಬ್ಬರಿ 300 ಕೋಟಿ. ಈ ಚಿತ್ರವು ರಾಜೀವ್ ಗಾಂಧಿ ಹತ್ಯೆಯ ಮಾಸ್ಟರ್ ಮೈಂಡ್ ಕುರಿತ ಚಿತ್ರ ಇದಾಗಿದೆ. ಈ ಚಿತ್ರದ ಹೆಸರು “ಎಲ್ ಟಿಟಿಇ”. ಚಿತ್ರಕ್ಕೆ ನಿರ್ದೇಶಕ ಎ.ಎಂ.ರಮೇಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು “ಎಲ್ ಟಿಟಿಇ” ಪ್ರಭಾಕರನ್ ಕುರಿತ ಸ್ಟೋರಿ ಇದಾಗಿದೆ ಎಂದು ಹೇಳಲಾಗಿದೆ. ಈ ಚಿತ್ರಕ್ಕಾಗಿ ಡೈರೆಕ್ಟರ್ ರಮೇಶ್ 25 ವರ್ಷಗಳ ಸಂಶೋಧನೆ ಮಾಡಿದ್ದಾರೆ. ರಾಣಾ ದಗ್ಗುಬಾಟಿ, ವೆಂಕಟೇಶ್, ಮಾಧವನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದ್ದು, “ಎಲ್ ಟಿಟಿಇ” ನಾಯಕರನ್ನೂ ಭೇಟಿ ಮಾಡಿ ವಿಷಯ ಸಂಗ್ರಹಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos