ರಾಣಾ ದಗ್ಗುಬಾಟಿ ಚಿತ್ರದಿಂದ ಸಾಯಿ ಪಲ್ಲವಿ ಔಟ್?

ರಾಣಾ ದಗ್ಗುಬಾಟಿ ಚಿತ್ರದಿಂದ ಸಾಯಿ ಪಲ್ಲವಿ ಔಟ್?

ಬೆಂಗಳೂರು, 04. ನ್ಯೂಸ್ ಏಕ್ಸ್ ಪ್ರಸ್: ನಟಿ ಸಾಯಿ ಪಲ್ಲವಿ ಸೌತ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನಟಿ ಅವರು ಸಿನಿಮಾಗಳಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿರಾಟ ಪರ್ವಂ ಚಿತ್ರದ ಮೂಲಕ ಸುದ್ಧಿಯಾಗಿದ್ದಾರೆ. ‘ ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಜೊತೆ ಸಾಯಿ ಪಲ್ಲವಿ ನಟಿಸಬೇಕಿತ್ತು,ಕೆಲ ದಿನಗಳ ಹಿಂದೆ ಸಾಯಿ ಪಲ್ಲವಿ ವಿರಾಟ ಪರ್ವಂ ಚಿತ್ರಕ್ಕೆ ಒಪ್ಪಿಕೊಂಡಿದ್ದರು. ಅದರೆ ಬೇರೆ ಬೇರೆ ಸಿನಿಮಾಗಳಲ್ಲಿ ಪಲ್ಲವಿ ಬ್ಯುಸಿ ಇರುವ ಕಾರಣದಿಂದ ಶೆಡ್ಯೂಲ್ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವರು ಚಿತ್ರದಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದ್ದೆ. ವಿರಾಟ ಪರ್ವಂ 1992 ರ ಕಾಲಘಟ್ಟದ ಐತಿಹಾಸಿಕ ಸಿನಿಮಾ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ಟಬು ನಟಿಸುತ್ತಿದ್ದಾರೆ. ಸುಧಾಕರ್ ಚೆರುಕುರಿ ಹಾಗೂ ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಾಣ  ಮಾಡುತ್ತಿದ್ದಾರೆ. ಚಿತ್ರದ ಶೊಟಿಂಗ್ ಶುರುವಿನ ಬಗ್ಗೆ ಚಿತ್ರ ತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos