ಇಂದು RR vs PBKS ಮುಖಾಮುಖಿ

ಇಂದು RR vs PBKS ಮುಖಾಮುಖಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್  2024 ರ 27ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ನಡೆಯುತ್ತದೆ. ರಾಜಸ್ಥಾನ ರಾಯಲ್ಸ್‌ ಪ್ರತಿ ಬಾರಿಯಂತೆ ಈ ಸಲವೂ ಆರಂಭದಲ್ಲಿ ಅಬ್ಬರಿಸಿ ಬಳಿಕ ಮಂಕಾಗುತ್ತದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿರುವಾಗಲೇ, ತಂಡಕ್ಕೆ ಇಂದು ಮಹತ್ವದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರಾಗಲಿದೆ.

ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್‌, ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ಶರಣಾಗಿತ್ತು. ರಾಜಸ್ಥಾನ ಕಳೆದ 6 ಆವೃತ್ತಿಗಳಲ್ಲಿ ಕೇವಲ 2ರಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ್ದು, ಈ ಸಲ ಪ್ಲೇ-ಆಫ್‌ಗೇರಬೇಕಿದ್ದರೆ, ಜಯದ ಲಯಕ್ಕೆ ಮರಳಬೇಕಿದೆ. ತಂಡದ ಬ್ಯಾಟಿಂಗ್‌ ಪಡೆ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಈ ಪಂದ್ಯದಲ್ಲಿ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ.

ರಾಜಸ್ಥಾನ ರಾಯಲ್ಸ್ ತಂಡದ ಪರ ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಅದ್ಭುತ ಲಯದಲ್ಲಿದ್ದು, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಹಾಗೂ ಶಿಮ್ರೊನ್ ಹೆಟ್ಮೇಯರ್ ಅಬ್ಬರಿಸಿದರೆ, ಪಂಜಾಬ್ ಬೌಲರ್‌ಗಳು ಕಂಗಾಲಾಗೋದು ಗ್ಯಾರಂಟಿ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ ಜತೆಗೆ ಚಹಲ್ ಹಾಗೂ ಅಶ್ವಿನ್ ಕರಾರುವಕ್ಕಾದ ದಾಳಿ ನಡೆಸಬೇಕಿದೆ.

ಮತ್ತೊಂದೆಡೆ 5 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಪಂಜಾಬ್‌ ಕಿಂಗ್ಸ್‌ ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ತಂಡದಲ್ಲಿ ಕೆಲ ಬದಲಾವಣೆ ಅವಶ್ಯಕತೆಯೂ ಇದೆ.

ಫ್ರೆಶ್ ನ್ಯೂಸ್

Latest Posts

Featured Videos