ನೆರೆ ಸಂತ್ರಸ್ತರಿಗೆ 5 ಸಾವಿರ ರೊಟ್ಟಿ ತಯಾರಿ

ನೆರೆ ಸಂತ್ರಸ್ತರಿಗೆ 5 ಸಾವಿರ ರೊಟ್ಟಿ ತಯಾರಿ

ಚಿತ್ರದುರ್ಗ, ಆ. 13:  ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಭಾವದಿಂದ ಜನರು ಮತ್ತು ಪ್ರಾಣಿಗಳು ನೀರಿನ ಪಾಲಾಗಿದ್ದಾರೆ. ಹೌದು, ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಗೆ ಇಡೀ ನಾಡಿನ ಜನರೇ ದುಃಖಿತರಾಗಿದ್ದು, ಅವರ ಸಮಸ್ಯೆಗಳಿಗೆ ನಗರದ ಅನೇಕ ಸಂಘ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳು ನೆರವು ನೀಡಲು ಸಾರ್ವಜನಿಕರಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

ನೆರೆ ಸಂತ್ರಸ್ತರ ಹಸಿವಿನ ಕೊರತೆಯನ್ನು ನೀಗಿಸಲು ಚಳ್ಳಕೆರೆಯ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು ಸುಮಾರು 5 ಸಾವಿರಕ್ಕೂ ಹೆಚ್ಚು ರೊಟ್ಟಿಹಾಗೂ ಚಟ್ನಿ ಪುಡಿಯನ್ನು ತಯಾರಿಸಿದ್ದಾರೆ.

ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬಾ ಮಾತನಾಡಿ, ಉತ್ತರ ಕರ್ನಾಟಕ ನೆರೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಹಸಿದ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ರೊಟ್ಟಿಗಳನ್ನು ತಯಾರಿಸುತ್ತಿದ್ದೇವೆ. ಇವುಗಳನ್ನು ಶೀಘ್ರದಲ್ಲೇ ಅಲ್ಲಿಗೆ ಕಳುಹಿಸಿಕೊಡಲಾಗುವುದು. ನೆರೆಯಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು, ಮಕ್ಕಳು, ವೃದ್ಧೆಯರು ಹಸಿವಿನಿಂದ ನರಳುತ್ತಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos