ಮುಖದ ಸೌಂದರ್ಯಕ್ಕೆ ರೋಸ್ ವಾಟರ್

ಮುಖದ ಸೌಂದರ್ಯಕ್ಕೆ ರೋಸ್ ವಾಟರ್

ಬೆಂಗಳೂರು, ಡಿ. 02: ರೋಸ್ ವಾಟರ್ ಅನಾದಿ ಕಾಲದಿಂದಲೂ ಬಳಸುವ ಸೌಂದರ್ಯವರ್ಧಕವಾಗಿದೆ. ರೋಸ್ ವಾಟರ್ ಬಳಸಿ ಅನೇಕ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು ಅಷ್ಟೇ ಅಲ್ಲದೆ ಆರೋಗ್ಯದ ಪ್ರಯೋಜನಗಳು ಕೂಡ ಇದೆ

ರೋಸ್ ವಾಟರ್ ಜೇನುತುಪ್ಪ: ಜೇನುತುಪ್ಪ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಹಚ್ಚಿಕೊಂಡರೇ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮುಖದಲ್ಲಿರುವ ಕಲೆಗಳು ಒಂದು ವಾರದಲ್ಲಿ ಮಾಯವಾಗುತ್ತಾದೆ.

ರೋಸ್ ವಾಟರ್ ಗ್ಲಿಸರಿನ್: ಒಂದು ಚಮಚ ರೋಸ್ ವಾಟರ್‌ನೊಂದಿಗೆ ಸ್ವಲ್ಪ ಗ್ಲಿಸರಿನ್ ಅನ್ನು ಬೆರೆಸಿಕೊಂಡು ಮುಖಕ್ಕೆ ಲೇಪಿಸಿ ನಯವಾಗಿ ಮಸಾಜ್ ಮಾಡಿದರೆ ಹೊಳೆಯುವ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ.

ರೋಸ್ ವಾಟರ್‌ ಲಿಂಬೆರಸ: ಲಿಂಬೆರಸಕ್ಕೆ ಒಂದು ಚಮಚ ರೋಸ್ ವಾಟರ್‌ ಬೆರಸಿ, ಮೊಡವೆ ಇರುವ ಸ್ಥಳದಲ್ಲಿ ಇದನ್ನು ಹಚ್ಚಿ 30 ನಿಮಿಷಗಳ ನಂತರ ತಂಪಾದ ನೀರಿನಿಂದ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತಾವೆ.

ಕೂದಲ ಹೊಳೆಪು: ಒಂದು ಕಪ್ ರೋಸ್ ವಾಟರ್‌ ಅನ್ನು ತಲೆಬುಡಕ್ಕೆ ಹಚ್ಚಿಕೊಳ್ಳಿ. ಇದು ಕೂದನ್ನು ಆಳವಾಗಿ ಕಂಡೀಶನ್ ಮಾಡಿ ಹೊಳಪು ನೀಡುತ್ತದೆ. ಇದರಿಂದ ಕೂದಲು ಹೊಳೆಯುತ್ತೀರುತ್ತದೆ.

ಕಡಲೆಹಿಟ್ಟು ರೋಸ್ ವಾಟರ್:  ಕಡಲೆಹಿಟ್ಟು ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಎಣ್ಣೇಯ ಅಂಶ ಕಡಿಮೆಯಾಗುತ್ತಾದೆ.

ತುಟಿಯ ಸುಂದರತೆಗೆ: ತುಟಿಗೆ ರೋಸ್ ವಾಟರ್ ಹಚ್ಚಿಕೊಳ್ಳುವುದರಿಂದ ತುಟಿಯು ಸುಂದರವಾಗಿ ಕಾಣುತ್ತದೆ ಮತ್ತು ಮೃದುವಾಗುತ್ತಾದೆ.

 

ಫ್ರೆಶ್ ನ್ಯೂಸ್

Latest Posts

Featured Videos